IAS IPS ಉನ್ನತ ಶಿಕ್ಷಣವನ್ನು ಕರಗತ ಮಾಡಲು ಕಠಿಣ ಪ್ರಯತ್ನ ಅಗತ್ಯ, ಸೇವಾ ಮನೋಭಾವದೊಂದಿಗೆ ಶಿಕ್ಷಣ ಪೂರ್ತಿಗೊಳಿಸಿ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ

IAS IPS ಉನ್ನತ ಶಿಕ್ಷಣವನ್ನು ಕರಗತ ಮಾಡಲು ಕಠಿಣ ಪ್ರಯತ್ನ ಅಗತ್ಯ, ಸೇವಾ ಮನೋಭಾವದೊಂದಿಗೆ ಶಿಕ್ಷಣ ಪೂರ್ತಿಗೊಳಿಸಿ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ  


ಎಸ್ಸೆಸ್ಸೆಫ್ ಕರ್ನಾಟಕ ‌ರಾಜ್ಯ ವಿಸ್ಡಂ ವಿಭಾಗದ EDUFOCUS ಕಾರ್ಯಕ್ರಮವು SSFರಾಜ್ಯಾಧ್ಯಕ್ಷರಾದ ಅಬ್ದುಲ್ ಲತೀಫ್ ಸ ಅದಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಿತು.


ಸಂಪನ್ಮೂಲ ವ್ಯಕ್ತಿಗಳಾಗಿ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಡಾ! ರಾಜೇಂದ್ರ ಕೆ.ವಿ ಅವರು ಆಗಮಿಸಿದರು. ಅವರು ಐಪಿಎಸ್ ಐಎಎಸ್ ವಿದ್ಯಾಭ್ಯಾಸದ ಬಗ್ಗೆ ಅತ್ಯಂತ ಮಹತ್ವವಾದ ತರಗತಿಯನ್ನು ನಡೆಸಿಕೊಟ್ಟರು. IAS IPS ಉನ್ನತ ಶಿಕ್ಷಣವನ್ನು ಕರಗತ ಮಾಡಲು ಕಠಿಣ ಪ್ರಯತ್ನ ಅಗತ್ಯ, ಸೇವಾ ಮನೋಭಾವದೊಂದಿಗೆ ಶಿಕ್ಷಣ ಪೂರ್ತಿಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ವಿದ್ಯಾರ್ಥಿಗಳಿಗೆ ಅಮೂಲ್ಯ ಸಲಹೆ ನೀಡಿದರು.


ರಾಜ್ಯ ನಾಯಕ ಸಯ್ಯದ್ ಅಲವಿ ತಂಙಳ್ ಮದನಿ ಕರ್ಕಿ ಕಾರ್ಯಕ್ರಮಕ್ಕೆ ದುಆ ಮೂಲಕ ಚಾಲನೆ ನೀಡಿದರು. SSF ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಉದ್ಘಾಟಿಸಿದರು.


ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ನ ಕೋಶಾಧಿಕಾರಿ ಹಾಫಿಝ್ ಸುಫ್ಯಾನ್ ಸಖಾಫಿ, ರಾಜ್ಯ SSF ಪದಾಧಿಕಾರಿಗಳು ರಾಜ್ಯ SSF ನಾಯಕರುಗಳು, SSF ಜಿಲ್ಲಾ ವಿಸ್ಡಂ ಕಾರ್ಯದರ್ಶಿಗಳು ನಾಯಕರುಗಳು ಕಾರ್ಯಕರ್ತರು ಸಹಿತ ರಾಜ್ಯದ ವಿವಿಧ ಜಿಲ್ಲೆಗಳ ಕ್ಯಾಂಪಸ್ ‌ವಿದ್ಯಾರ್ಥಿಗಳು ಭಾಗವಹಿಸಿದ್ದರು.

ರಾಜ್ಯ ವಿಸ್ಡಂ ಕಾರ್ಯದರ್ಶಿ ಎನ್‌.ಸಿ.ರಹೀಂ ಕಾರ್ಕಳ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

Previous Post Next Post