ಯುವಕನ ನಿಫಾ ವರದಿ ನೆಗೆಟೀವ್, ಗಲಿಬಿಲಿಯಾಗಿದ್ದ ದ.ಕ ಜಿಲ್ಲಾಡಳಿತ ನಿರಾಳ

ಯುವಕನ ನಿಫಾ ವರದಿ ನೆಗೆಟೀವ್, ಗಲಿಬಿಲಿಯಾಗಿದ್ದ ದ.ಕ ಜಿಲ್ಲಾಡಳಿತ ನಿರಾಳ 
ಮಂಗಳೂರು, ಸೆಪ್ಟೆಂಬರ್ 15; ನಿಫಾ ವೈರಸ್ ಸೋಂಕು ಭೀತಿಯಿಂದ ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಕಾರವಾರದ ಯುವಕನ ವರದಿ ಜಿಲ್ಲಾಡಳಿತದ ಕೈ ಸೇರಿದೆ.

ಪುಣೆಯ ಲ್ಯಾಬ್‌ಗೆ ಯುವಕನ ನಿಫಾ ವೈರಸ್ ಪತ್ತೆಗಾಗಿ ಮಾದರಿ ಕಳುಹಿಸಿದ್ದು, ಯುವಕನ ವರದಿ ನೆಗೆಟಿವ್ ಆಗಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ನಿಟ್ಟುಸಿರು ಬಿಟ್ಟಿದೆ.


ನಿಫಾ ಸೋಂಕು ತಗುಲಿರುವ ಶಂಕೆ ಮೇರೆಗೆ ಸ್ವ-ಇಚ್ಛೆಯಿಂದ ಯುವಕ ನಿಫಾ ಪರೀಕ್ಷೆಗೊಳಗಾಗಿದ್ದ. ಇದೀಗ ಯುವಕನ ವರದಿಯು ಆರೋಗ್ಯ ಇಲಾಖೆಯ ಕೈ ಸೇರಿದ್ದು, ವರದಿಯು 'ನೆಗೆಟಿವ್' ಬಂದಿರೋದಾಗಿ ದಕ್ಷಿಣ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.


ಈ ಮೂಲಕ ಕೇರಳ ರಾಜ್ಯದಿಂದ ಕರ್ನಾಟಕಕ್ಕೂ ನಿಫಾ ವೈರಸ್ ಕಾಲಿಟ್ಟಿದೆಯೇ? ಅನ್ನೋ ಆತಂಕ ಕೊಂಚ ದೂರವಾದಂತಾಗಿದೆ. ಕಾರವಾರ ಮೂಲದ ಯುವಕ ಗೋವಾದಲ್ಲಿ ಮೈಕ್ರೋಬಯೋಲಾಜಿಸ್ಟ್ ಆಗಿದ್ದು, ಎರಡು ದಿನಗಳ ಹಿಂದಷ್ಟೇ ಮಂಗಳೂರಿಗೆ ಆಗಮಿಸಿ ನಿಫಾ ವೈರಸ್ ಸೋಂಕಿನ ಪತ್ತೆಗಾಗಿ ನಡೆಸುವ ಪರೀಕ್ಷೆಗೆ ಒಳಪಟ್ಟಿದ್ದರು.


ಯುವಕನಲ್ಲಿ ನಿಫಾ ವೈರಸ್ ಸೋಂಕಿನ ಲಕ್ಷಣಗಳಿದ್ದು, ಕೂಡಲೇ ತಪಾಸಣೆ ಬಳಿಕ ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ಪ್ರತ್ಯೇಕ ನಿಗಾದಲ್ಲಿರಿಸಲಾಗಿತ್ತು‌. ಪರೀಕ್ಷಾ ಮಾದರಿಯನ್ನು ಪುಣೆಯ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾಗಿದ್ದು, ಇದೀಗ ವರದಿಯು ಆರೋಗ್ಯ ಇಲಾಖೆಯ ಕೈ ಸೇರಿದ್ದು ನಿಫಾ ಸೋಂಕಿನ ಭೀತಿ ಇಲ್ಲ ಅನ್ನೋದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ತಿಳಿಸಿದ್ದಾರೆ.


ಕೇರಳದಲ್ಲಿ ನಿಫಾ ವೈರಸ್ ಪತ್ತೆಯಾದ ಬಳಿಕ ದಕ್ಷಿಣ ಕನ್ನಡ ಜಿಲ್ಲಾಡಳಿತ ಫುಲ್ ಅಲರ್ಟ್ ಆಗಿತ್ತು. ಆದರೆ ಇದರ ನಡುವೆ ನಿಫಾ ವೈರಸ್‌ನ ಆಂತಕ ಇದೆಯೆಂದು ಯುವಕ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ. ಕಾರವಾರ ಮೂಲದ ಈ ಯುವಕ ಗೋವಾದಲ್ಲಿ ನಿಫಾ ವೈರಸ್ ಟೆಸ್ಟಿಂಗ್ ಮಾಡುವ ಕಿಟ್ ತಯಾರಿಕಾ ಲ್ಯಾಬ್‌ನಲ್ಲಿ ಕೆಲಸ ಮಾಡ್ತಿದ್ದ. ಅಲ್ಲಿಂದ ರಜೆಯಲ್ಲಿ ಕಾರವಾರಕ್ಕೆ ಬಂದ ಮೇಲೆ ಆತನಿಗೆ ಜ್ವರ ಕಾಣಿಸಿಕೊಂಡಿದೆ.


ಹೀಗಾಗಿ ನಿಫಾ ವೈರಸ್ ಇರಬಹುದು ಎಂದು ಕಾರವಾರ ಆಸ್ಪತ್ರೆಗೆ ಹೋಗಿ ಅಲ್ಲಿಂದ ಮಣಿಪಾಲ ಆಸ್ಪತ್ರೆಗೆ ಬಂದಿದ್ದಾನೆ. ಆ ಬಳಿಕ ಅಲ್ಲಿಂದ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ಬಂದಿದ್ದು ಆತನ ಸ್ಯಾಂಪಲ್‌ನ್ನು ಸಂಗ್ರಹ ಮಾಡಿ, ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆ ಪುಣೆಯ ಲ್ಯಾಬ್‌ಗೆ ಕಳುಹಿಸಿತ್ತು. ಇದೀಗ ರಿಪೋರ್ಟ್ ನೆಗೆಟಿವ್ ಬಂದಿದೆ.


Previous Post Next Post