ನಾಳೆಯಿಂದ (ನ.26-28) ಕೃಷ್ಣಾಪುರದಲ್ಲಿ ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಪ್ರತಿಭೋತ್ಸವ

ನಾಳೆಯಿಂದ (ನ.26-28) ಕೃಷ್ಣಾಪುರದಲ್ಲಿ ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಪ್ರತಿಭೋತ್ಸವ 

ಮಂಗಳೂರು: ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ವತಿಯಿಂದ ನಾಳೆಯಿಂದ (ನ. 26) 28 ರವರೆಗೆ ರಾಜ್ಯ ಕರಾವಳಿಯ ತೀರ ಕೃಷ್ಣಾಪುರದಲ್ಲಿ ರಾಜ್ಯಮಟ್ಟದ ಪ್ರತಿಭೋತ್ಸವ ನಡೆಯಲಿದೆ. ಇದರಲ್ಲಿ ಸುಮಾರು ವಿವಿಧ ಜಿಲ್ಲೆಗಳಿಂದ ಆಯ್ಕೆಯಾದ 700 ಪ್ರತಿಭೆಗಳು 70 ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. 


ಕರ್ನಾಟಕ ಸುನ್ನೀ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹುಸೈನ್ ಸಅದಿ ಕೆಸಿ ರೋಡ್ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದು, ನವೆಂಬರ್ 26 ಶುಕ್ರವಾರ ಬೆಳಿಗ್ಗೆ 7 ರಿಂದ ದಅವಾ ವಿಭಾಗದ ವಿವಿಧ ಸ್ಪರ್ಧೆಗಳು ನಡೆಯಲಿದೆ. ಮಗ್ರಿಬ್ ನಂತರ ವಿವಿಧ ಜಿಲ್ಲೆಗಳ ವಿಜೇತ ತಂಡಗಳ ಆಕರ್ಷಕ ಬುರ್ದಾ ಸ್ಪರ್ಧೆಗಳು ನಡೆಯಲಿದ್ದು, ರಾತ್ರಿ 9 ಕ್ಕೆ ಖ್ಯಾತ ಭಾಷಣಗಾರ ಅನಸ್ ಅಮಾನಿ ಕೇರಳ ಧಾರ್ಮಿಕ ಪ್ರವಚನ ನೀಡಲಿದ್ದಾರೆ. 


ನವೆಂಬರ್ 27 ರ ಬೆಳಿಗ್ಗೆ 10 ಕ್ಕೆ ಗಣ್ಯರ ಸಮಾವೇಶ ನಡೆಯಲಿದ್ದು, ಮಂಗಳೂರು ವಿವಿ ಉಪ ಕುಲಪತಿ ಡಾ. ಪ್ರೊ. ಪಿಎಸ್ ಯಡಪಡಿತ್ತಾಯ ಉದ್ಘಾಟಿಸಲಿದ್ದಾರೆ. ಇದೇ ವೇಳೆ ಅಕ್ಷರಸಂತ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಗುವುದು. ರಾತ್ರಿ ಏಳಕ್ಕೆ ಆಕರ್ಷಕ ದಫ್ ಸ್ಪರ್ಧೆ ನಡೆಯಲಿದೆ. 


ನವೆಂಬರ್ 28 ರಂದು ಬೆಳಿಗ್ಗೆ 10ಕ್ಕೆ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷರು ಅಬ್ದುಲ್ಲತೀಫ್ ಸಅದಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕ ಸುನ್ನಿ ಉಲಮಾ ಒಕ್ಕೂಟದ ಅಧ್ಯಕ್ಷರು ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ರವರು ಉದ್ಘಾಟಿಸುವರು. ದಕ್ಷಿಣ ಕನ್ನಡ ಕಸಾಪ ನೂತನ ಅಧ್ಯಕ್ಷರು ಡಾಕ್ಟರ್ ಎಂ ಪಿ ಶ್ರೀನಾಥ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ವೇಳೆ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಆಯ್ಕೆಯಾದ ಶಾಫಿ ಸಅದಿಯವರನ್ನು ಸನ್ಮಾನಿಸಲಾಗುವುದು. ಸಾಹಿತ್ಯ ಕ್ಷೇತ್ರದ ಸಾಧಕ ಸೈಯದ್ ಹಬೀಬುಲ್ಲಾ ತಙಳ್ ಪೆರುವಾಯಿ ಅವರಿಗೆ ಸುನ್ನಿ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು. 


ವಿದ್ಯಾರ್ಥಿ ಮನಸ್ಸುಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರಜಗತ್ತಿಗೆ ತೋರಿಸಲು ಮತ್ತು ಅದನ್ನು ಪೋಷಿಸಲು ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಸಿಕೊಂಡು ಬರುತ್ತಿರುವ ಪ್ರತಿಭೋತ್ಸವ ಇದಾಗಿದ್ದು, ರಾಜ್ಯದ  22 ಜಿಲ್ಲೆಗಳ 700 ಪ್ರತಿಭೆಗಳು 70 ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.  


Read More ಮುಂದೆ  ಓದಿ 

Previous Post Next Post