ನಿಗದಿಯಂತೆ ನಾಳೆ ಬೆಳಿಗ್ಗೆ 8.30 ರಿಂದ ಮೇಕೆದಾಟು ಪಾದಯಾತ್ರೆ ಆರಂಭ: ಡಿಕೆಶಿ

ನಿಗದಿಯಂತೆ ನಾಳೆ ಬೆಳಿಗ್ಗೆ 8.30 ರಿಂದ ಮೇಕೆದಾಟು ಪಾದಯಾತ್ರೆ ಆರಂಭ: ಡಿಕೆಶಿ 



ರಾಮನಗರ: ನಮ್ಮ ಪಾದಯಾತ್ರೆಯನ್ನು (Mekedatu Padayatra ) ಬಿಜೆಪಿ ಸರ್ಕಾರ ನಿಲ್ಲಿಸೋ ಪ್ರಯತ್ನ ನಡೆಸಿದೆ. ಜಿಲ್ಲೆಯಲ್ಲಿ ಕೋವಿಡ್ ಲೆಕ್ಕದ ಸುಳ್ಳನ್ನು ಹೇಳುವ ಮೂಲಕ ಕರ್ಪ್ಯೂ ಜಾರಿಗೊಳಿಸಿದೆ. ಆದ್ರೇ ನಮ್ಮ ಪಾದಯಾತ್ರೆ ನಿಲ್ಲೋದಿಲ್ಲ. 
ನಿಗದಿಯಂತೆ ನಾಳೆ ಬೆಳಿಗ್ಗೆ ಮೇಕೆದಾಟು ಪಾದಯಾತ್ರೆ ಆರಂಭವಾಗಲಿದೆ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ( DK Shivakumar ) ಘೋಷಣೆ ಮಾಡಿದರು.


ರಾಮನಗರದ ಕನಕಪುರುದಲ್ಲಿನ ತಮ್ಮ ನಿವಾಸದಲ್ಲಿ ಇಂದು ಕಾಂಗ್ರೆಸ್ ಶಾಸಕರು, ವಿಧಾನಪರಿಷತ್, ಲೋಕಸಭೆ, ರಾಜ್ಯಸಭೆ ಸದಸ್ಯರು, ಕಾಂಗ್ರೆಸ್ ವಿವಿಧ ಮುಖಂಡರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಪಾದಯಾತ್ರೆಗೆ ಇಡೀ ರಾಜ್ಯವೇ ಬೆಂಬಲಿಸುತ್ತಿದೆ. ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ನಾಳೆ ಪಾದಯಾತ್ರೆಯನ್ನು ನಡೆಸಿಯೇ ತೀರುತ್ತದೆ ಎಂದರು.


ರಾಜಕಾರಣಕ್ಕಾಗಿ ಮೇಕೆದಾಟು ಪಾದಯಾತ್ರೆಯನ್ನು ಹಮ್ಮಿಕೊಂಡಿಲ್ಲ. ರೈತರ ಹಿತದೃಷ್ಠಿಯಿಂದ ಹಮ್ಮಿಕೊಳ್ಳಲಾಗಿದೆ. ನಾಳೆ ಪಾದಯಾತ್ರೆಯನ್ನು ನಿಗದಿಯಂತೆ ನಡೆಸೋದಕ್ಕೆ ಇಂದಿನ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಂಡಿದ್ದೇವೆ. ಕೊರೋನಾ ನಿಯಮವನ್ನು ಪಾಲಿಸಿಕೊಂಡು ಪಾದಯಾತ್ರೆಯನ್ನು ನಡೆಸಲಾಗುತ್ತದೆ. ನಾಳೆ ಬೆಳಿಗ್ಗೆ 8 ಗಂಟೆಗೆ ಪಾದಯಾತ್ರೆ ಆರಂಭವಾಗಲಿದೆ ಎಂಬುದಾಗಿ ತಿಳಿಸಿದರು.


Previous Post Next Post