ರಾಜ್ಯದಲ್ಲಿ ಪಾಸಿಟಿವ್ ಪ್ರಕರಣಗಳಲ್ಲಿ ಗಣನೀಯ ಇಳಿಕೆ, ಇಂದು 14,366 ಪಾಸಿಟಿವ್, 60,914 ಡಿಸ್ಚಾರ್ಜ್, ಪಾಸಿಟಿವಿಟಿ ದರ 13.45%

ರಾಜ್ಯದಲ್ಲಿ ಪಾಸಿಟಿವ್ ಪ್ರಕರಣಗಳಲ್ಲಿ ಗಣನೀಯ ಇಳಿಕೆ, ಇಂದು 14,366 ಪಾಸಿಟಿವ್, 60,914 ಡಿಸ್ಚಾರ್ಜ್, ಪಾಸಿಟಿವಿಟಿ ದರ 13.45% 


ಬೆಂಗಳೂರು: ರಾಜ್ಯದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳಲ್ಲಿ ಗಣನೀಯ ಇಳಿಕೆ ಕಂಡು ಬರುತ್ತಿದ್ದು, ಮಂಗಳವಾರ 14,366 ಹೊಸ ಪ್ರಕರಣಗಳು ವರದಿಯಾಗಿದ್ದು, ಇಂದು 58 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಆ ಪೈಕಿ 9 ಮಂದಿ ಬೆಂಗಳೂರಿನವರು.


ಪಾಸಿಟಿವಿಟಿ ದರವೂ ದರವು ಕುಸಿಯುತ್ತಲೇ ಇರುವುದರಿಂದ ಬೆಂಗಳೂರಿನಲ್ಲಿ ಪ್ರಕರಣಗಳು 7 ಸಾವಿರಕ್ಕಿಂತ ಕೆಳಗಿಳಿದಿದ್ದು, ಇಂದು 6,685 ಪ್ರಕರಣಗಳು ದೃಢ ಪಟ್ಟಿವೆ. ರಾಜ್ಯದಲ್ಲಿ ಪಾಸಿಟಿವಿಟಿ ದರ 13.45% ಆಗಿದೆ. ಇಂದು 60,914 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ.


ರಾಜ್ಯದಲ್ಲಿ 1,97,725 ಸಕ್ರಿಯ ಪ್ರಕರಣಗಳಿದ್ದು, ಬೆಂಗಳೂರಿನಲ್ಲಿ 1ಲಕ್ಷದ 05 ಸಾವಿರ ಪ್ರಕರಣಗಳಿವೆ. ಇಂದು 1,06,799 ಮಂದಿಗೆ ಪರೀಕ್ಷೆಗಳನ್ನು ನಡೆಸಲಾಗಿದೆ.


ಸೋಮವಾರ 24,172 ಹೊಸ ಪ್ರಕರಣಗಳು, ಭಾನುವಾರ 28,264 ಹೊಸ ಪ್ರಕರಣಗಳು ದೃಢ ಪಟ್ಟಿದ್ದವು. ಜನವರಿ 23 ರಂದು ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ 50 ಸಾವಿರ ದಾಟಿ ಆತಂಕ ನಿರ್ಮಾಣವಾಗಿತ್ತು, ಆ ಬಳಿಕ ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ.

Previous Post Next Post