ಯುದ್ಧ ಸನ್ನಿವೇಶಗಳು ಮಾನವ ಜಗತ್ತಿಗೆ ಅಪಾಯಕಾರಿ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಿರಿ: ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್

ಯುದ್ಧ ಸನ್ನಿವೇಶಗಳು ಮಾನವ ಜಗತ್ತಿಗೆ ಅಪಾಯಕಾರಿ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಿರಿ: ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ 


ನವದೆಹಲಿ | ಉಕ್ರೇನ್‌ನ ಪರಿಸ್ಥಿತಿ "ಅಲ್ಲಿನ ಜನತೆಯಲ್ಲಿ ಭಯವನ್ನುಂಟುಮಾಡಿದೆ" ಯುದ್ಧವನ್ನು ತಡೆಗಟ್ಟಲು ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯಲು ವಿಶ್ವಸಂಸ್ಥೆ ಮತ್ತು ಅಂತರರಾಷ್ಟ್ರೀಯ ಸಮುದಾಯ ಮಧ್ಯಸ್ಥಿಕೆ ವಹಿಸಬೇಕೆಂದು ಭಾರತೀಯ ಗ್ರ್ಯಾಂಡ್ ಮುಫ್ತಿ ಶೇಖ್ ಅಬುಬಕರ್ ಅಹ್ಮದ್ ಅವರು ಕರೆ ನೀಡಿದರು.


ಪ್ರಪಂಚದಾದ್ಯಂತದ ರಾಷ್ಟ್ರಗಳು ಮಾರಣಾಂತಿಕ, ಮತ್ತು ಸಾಂಕ್ರಾಮಿಕ ರೋಗಗಳ ಭಯದಿಂದ  ಹೊರ ಬರುವುತ್ತಿರವ ಈ ಸನ್ನಿವೇಶದಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಪರಿಸ್ಥಿತಿಯು ಅಪಾಯಕಾರಿಯಾಗಿದೆ.  ವಿಶ್ವಸಂಸ್ಥೆ ಮತ್ತು ಉಳಿದ ಅಂತರರಾಷ್ಟ್ರೀಯ ಸಮುದಾಯವು ರಷ್ಯಾವನ್ನು ಯುದ್ಧಕ್ಕೆ ಹೋಗದಂತೆ ತಡೆಯಲು ಮುಂದಾಗಬೇಕು.  ಪ್ರಪಂಚದ ಜನರು ಶಾಂತಿ ಮತ್ತು ಮಾನವೀಯತೆಯನ್ನು ಬಯಸುತ್ತಾರೆ. ಜನರು ತಮ್ಮ ಸಹಜೀವಿಗಳಿಗೆ ಸಹಾಯ ಮಾಡಲು ಮತ್ತು ಬಿಕ್ಕಟ್ಟುಗಳನ್ನು ನಿವಾರಿಸಲು ಒಗ್ಗಟ್ಟಾಗಿ ಪ್ರಯತ್ನಿಸಬೇಕಾಗಿದೆ.  ಆದಾಗ್ಯೂ, ಪಕ್ಷಪಾತದ ಧೋರಣೆ ಮತ್ತು ಶಾಂತಿಗೆ ಧಕ್ಕೆ ತರುವ ಕಾರ್ಯಗಳು ದುರದೃಷ್ಟಕರ ಎಂದು ಇಂಡಿಯನ್ ಗ್ರಾಂಡ್ ಮುಫ್ತಿ ಹೇಳಿದ್ದಾರೆ.


ಯುದ್ಧ ವಿರಾಮ ಮತ್ತು  ಜಗತ್ತಿನ ಶಾಂತಿ ಸೌಹಾರ್ದತೆಗಾಗಿ, ಮನುಕುಲದ ರಕ್ಷಣೆಗಾಗಿ ಪ್ರಾರ್ಥಿಸಲು ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ಜಗತ್ತಿಗೆ ಕರೆ ನೀಡಿದರು.


Previous Post Next Post