ಉಕ್ರೇನ್ ರಾಜಧಾನಿಯತ್ತ ರಷ್ಯಾ ಪಡೆ

ಉಕ್ರೇನ್ ರಾಜಧಾನಿಯತ್ತ ರಷ್ಯಾ ಪಡೆ

ಉಕ್ರೇನ್ ರಾಜಧಾನಿ ಕೀವ್ ನಿಂದ ರಷ್ಯದ ಪಡೆಗಳು ಕೇವಲ 32 ಕಿಲೋಮೀಟರ್ ದೂರದಲ್ಲಿದ್ದು, ಉಕ್ರೇನ್ ಸರ್ಕಾರವನ್ನು ಬೀಳಿಸುವ ಸನ್ನಾಹದಲ್ಲಿವೆ ಎಂದು ಬಿಡೆನ್ ಆಡಳಿತದ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಮೂಲಗಳನ್ನು ಉಲ್ಲೇಖಿಸಿ ಸಿ ಎನ್ ಎನ್ ಈ ವರದಿ ಮಾಡಿದೆ. ಇತ್ತ, ರಷ್ಯದ ಪುಟಿನ್ ಮಾತ್ರ ಅದಾಗಲೇ ತಮಗೆ ಉಕ್ರೇನ್ ಅನ್ನು ವಶಪಡಿಸಿಕೊಳ್ಳುವ ಯಾವ ಇರಾದೆಯೂ ಇಲ್ಲ, ಅಲ್ಲಿಂದ ಸ್ವಾತಂತ್ರ್ಯ ಬಯಸಿರುವ ಕೆಲ ಪ್ರಾಂತ್ಯಗಳ ಪರವಾಗಿ ಮಾತ್ರವೇ ತಮ್ಮ ಮಿಲಿಟರಿ ಕಾರ್ಯಾಚರಣೆ ಎಂದಿದ್ದಾರೆ.


ಆದರೆ, ಉಕ್ರೇನ್ ರಾಜಧಾನಿ ರಷ್ಯದ ಗಡಿಗೆ ತಾಗಿಕೊಂಡೇನೂ ಇಲ್ಲ. ಅಷ್ಟಾಗಿಯೂ ತನ್ನ ಮಿತ್ರರಾಷ್ಟ್ರ ಬೆಲಾರೂಸ್ ಸಹಾಯದಿಂದ ಗಡಿಯೊಳಗೆ ನುಗ್ಗಿರುವ ರಷ್ಯ ಪಡೆ ಕೀವ್ ಅನ್ನು ಸಮೀಪಿಸುತ್ತಿದ್ದು, ಅಮೆರಿಕ ಅಧಿಕಾರಿಗಳ ಪ್ರಕಾರ ಕೇವಲ 32 ಕಿ.ಮೀ. ದೂರದಲ್ಲಿ ಈ ಪಡೆಗಳಿದ್ದು, ಯಾವುದೇ ಕ್ಷಣದಲ್ಲಿ ಉಕ್ರೇನ್ ರಾಜಧಾನಿ ರಷ್ಯದ ಕೈವಶವಾಗಬಹುದು ಎಂದು ತಿಳಿದುಬಂದಿದೆ.


ಈ ಯುದ್ಧದಲ್ಲಿ ನಾವು ಏಕಾಂಗಿಯಾಗಿದ್ದೇವೆ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ


ಕೈವ್​ನಲ್ಲಿ ಇಂದು ಎರಡು ದೊಡ್ಡ ಸ್ಫೋಟದ ಸದ್ದು ಕೇಳಿಬಂದಿದೆ. ಶುಕ್ರವಾರ ಮಾತನಾಡಿರುವ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ರಷ್ಯಾ ಮೇಲಿನ ಈ ಯುದ್ಧದಲ್ಲಿ ನಾವು ಏಕಾಂಗಿ ಎಂದು ಹೇಳಿದ್ಧಾರೆ.


ಮೊದಲ ದಿನ ಸುಮಾರು 137 ಜನ ಉಕ್ರೇನಿಯನ್ನರು ಮರಣವನ್ನಪ್ಪಿದ್ದಾರೆ. ಇದರಲ್ಲಿ ಮಿಲಿಟರಿ ಸಿಬ್ಬಂದಿ, ನಾಗರಿಕರು ಸೇರಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky) ವಿಡಿಯೋ ಸಂದೇಶದಲ್ಲಿ ಮಾತನಾಡಿ, ಈ ಯುದ್ಧದಲ್ಲಿ ಉಕ್ರೇನ್ ಏಕಾಂಗಿಯಾಗಿದೆ ಎಂದು ಹೇಳಿದ್ದಾರೆ. ಶುಕ್ರವಾರ ವಿಡಿಯೋ ಸಂದೇಶದ ಮೂಲಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, 'ನಮ್ಮ ದೇಶವನ್ನು ರಕ್ಷಿಸಲು, ರಷ್ಯಾ ವಿರುದ್ಧ ಹೋರಾಡಲು ನಾವು ಏಕಾಂಗಿಯಾಗಿದ್ದೇವೆ‌' ಎಂದು ಹೇಳಿದ್ದಾರೆ. 'ನಮ್ಮೊಂದಿಗೆ ಯಾರು ಹೋರಾಡಲು ಸಿದ್ಧರಾಗಿದ್ದಾರೆ?' ಎಂದು ಪ್ರಶ್ನಿಸಿರುವ ಅವರು, 'ನಮಗೆ ಯಾರೂ ಕಾಣುತ್ತಿಲ್ಲ. ಉಕ್ರೇನ್​ಗೆ ನ್ಯಾಟೋ ಸದಸ್ಯತ್ವದ ಖಚಿತತೆ ನೀಡಲು ಯಾರು ಸಿದ್ಧರಿದ್ದಾರೆ? ಎಲ್ಲರೂ ಭಯಪಡುತ್ತಾರೆ' ಎಂದು ಹೇಳಿದ್ದಾರೆ.

Previous Post Next Post