ಶಿರವಸ್ತ್ರ ವಿವಾದ: ವಿಚಾರಣೆ ಅಂತ್ಯ, ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿ ಎಸ್.ಕೃಷ್ಣ ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಜೆ.ಎಂ. ಖಾಜಿ ಜೈಬುನ್ನಿಸಾ ಅವರಿದ್ದ ತ್ರಿಸದಸ್ಯ ಪೀಠವು ವಾದ-ಪ್ರತಿವಾದಗಳನ್ನು ಆಲಿಸಿ ವಿಚಾರಣೆಯನ್ನು ಮುಕ್ತಾಯಗೊಳಿಸಿದೆ. ತೀರ್ಪನ್ನು ಕಾಯ್ದಿರಿಸಿರುವ ಪೀಠ ಅಲ್ಲದೆ ಇನ್ನೇನಾದರೂ ಅಂಶಗಳಿದ್ದಲ್ಲಿ ಅದನ್ನು ಲಿಖಿತವಾಗಿ ಸಲ್ಲಿಸಲು ಅವಕಾಶ ನೀಡಿದೆ.