ಎಸ್ಸೆಸ್ಸೆಫ್ ರಾಷ್ಟ್ರ ಮಟ್ಟದ ಸಾಹಿತ್ಯೋತ್ಸವ: ರಾಜ್ ಕೋಟ್ ನಲ್ಲಿ ಪ್ರೌಢ ಸಮಾಪ್ತಿ ಕಾಶ್ಮೀರ ಪ್ರಥಮ

ಎಸ್ಸೆಸ್ಸೆಫ್ ರಾಷ್ಟ್ರ ಮಟ್ಟದ ಸಾಹಿತ್ಯೋತ್ಸವ: ರಾಜ್ ಕೋಟ್ ನಲ್ಲಿ ಪ್ರೌಢ ಸಮಾಪ್ತಿ ಕಾಶ್ಮೀರ ಪ್ರಥಮ   

ಚೊಚ್ಚಲ ಸಾಹಿತ್ಯ ಕಿರೀಟಕ್ಕೆ ಮುತ್ತಿಟ್ಟ ಕಾಶ್ಮೀರ, ಕನ್ನಡ ಮಕ್ಕಳ ಅಮೋಘ ಸಾಧನೆ, ಕರ್ನಾಟಕ ರನ್ನರ್ ಅಪ್, ನಾವೇನು ಕಮ್ಮಿ? ಅಂತಿಮ ಹಂತದಲ್ಲಿ ತೃತೀಯ ಸ್ಥಾನ ಪಡೆದುಕೊಂಡ ಕೇರಳ, ಉತ್ತಮ ಸಾಧನೆಯೊಂದಿಗೆ ಅತಿವೇಗ ಮುನ್ನುಗ್ಗುತ್ತಿದ್ದ ಮಧ್ಯಪ್ರದೇಶ, ಕೇರಳದ ನಾಗಾಲೋಟದ ಮುಂದೆ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಫೆ.22 ರಿಂದ ಪ್ರಾರಂಭಗೊಂಡ ಕಾರ್ಯಕ್ರಮಗಳು ವಿವಿಧ ಸಾಹಿತ್ಯ ಕಲರವಕ್ಕೆ ಸಾಕ್ಷಿಯಾಯಿತು. ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದರು. ಪದ್ಮಶ್ರೀ ಪ್ರೊಫೆಸರ್ ಅಖ್ತರ್ ವಾಸಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. 


#ssfnationalsahityotsav-22 __ ಗುಜರಾತಿನ ಮಣ್ಣಿನಲ್ಲಿ ಪ್ರೌಡ ಸಮಾಪ್ತಿ 
ದೇಶದ 24 ರಾಜ್ಯಗಳು ಭಾಗಿ


ದೇಶದ ಟಾಪ್ ರಾಜ್ಯ ಸಾಹಿತ್ಯೋತ್ಸವದಲ್ಲೂ ಟಾಪರ್. ಯಾವ ರಾಜ್ಯವೂ ಸೋತಿಲ್ಲ. ಸಾಹಿತ್ಯೋತ್ಸವ ಗೆದ್ದಿದೆ. 

ಕಾಶ್ಮೀರದಿಂದ ಕನ್ಯಾಕುಮಾರಿ ವರೆಗಿನ ಇಪ್ಪತ್ತನಾಲ್ಕು ರಾಜ್ಯಗಳು ಭಾಗವಹಿಸಿದ ದೇಶದ ಸುನ್ನಿ ವಿದ್ಯಾರ್ಥಿಗಳ ಅತೀ ದೊಡ್ದ ಸ್ಪರ್ಧೆಗೆ ಗುಜರಾತಿನ ರಾಜಕೋಟ್ ಸಾಕ್ಷಿಯಾಯಿತು. ದೇಶದ ಎಲ್ಲಾ ಪ್ರತಿಭೆಗಳ ಅಮೋಘ ಸಾಧನೆ, ಪ್ರತಿಭೆಗಳ ಅನಾವರಣ ಕಂಡು ದೇಶವೇ ಖುಷಿ ಪಟ್ಟಿರಬೇಕು. ಕಲುಷಿತಗೊಂಡ ಈ ವಾತಾವರಣವು ತಿಳಿಯಾಗಲು ಈ ಉತ್ಸವ ಕಾರಣವಾಗಲಿದೆ.


ತಿಂಗಳುಗಳ ಕಾಲ ಇದರ ಹಿಂದೆ ಬಿದ್ದು ಕಾರ್ಯಕ್ರಮವನ್ನು ಯಶಸ್ಸು ಗೊಳಿಸಿದ ssfindia ರಾಷ್ಟ್ರೀಯ ಸಮಿತಿಗೆ ತುಂಬುಹೃದಯದ ಅಭಿನಂದನೆಗಳನ್ನು ಸಲ್ಲಿಸುವ. ವಿವಿಧ ರಾಜ್ಯಗಳ ಪ್ರತಿಭೆಗಳನ್ನೂ ತಲುಪಿಸುವಲ್ಲಿ ಕಠಿಣ ಪರಿಶ್ರಮ ಪಟ್ಟ ರಾಜ್ಯ ಸಮಿತಿಗಳು ಅಲ್ಲಾಹನು ಅರ್ಹವಾದ ಸವಾಬು ನೀಡಲಿ- ಆಮೀನ್


2023 ರಾಷ್ಟ್ರ ಮಟ್ಟದ ಸಾಹಿತ್ಯೋತ್ಸವಕ್ಕೆ ಮಧ್ಯಪ್ರದೇಶದ ಇಂದೋರ್ ಸಾಕ್ಷಿಯಾಗಲಿದೆ.

Previous Post Next Post