ರಷ್ಯಾ ಉಕ್ರೇನ್ ಯುದ್ಧ: ಕನ್ನಡಿಗ ನವೀನ್ ಸಾವು, ತುರ್ತು ಸಭೆ ಕರೆದು ಪ್ರಧಾನಿ ನರೇಂದ್ರ ಮೋದಿ
ಮುಂದಿನ 48 ಗಂಟೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ತುರ್ತು ಸಭೆ ನಡೆಸೋ ಸಾಧ್ಯತೆ ಇದೆ. ನವೀನ್ ಸಾವು ಹಿನ್ನೆಲೆಯಲ್ಲಿ ಈ ಉನ್ನತ ಸಭೆ ನಡೆಸಲಾಗುತ್ತಿದೆ. ಉಕ್ರೇನ್ನಲ್ಲಿ ಸಿಲುಕಿರೋ ಭಾರತೀಯರನ್ನು ಹೇಗೆ ಯಾವುದೇ ಸಾವು ನೋವು ಸಂಭವಿಸದೆ ರಕ್ಷಿಸಬೇಕು ಎಂಬ ಸಭೆ ಇದಾಗಿದೆ.
ಉಕ್ರೇನ್ ನಲ್ಲಿ ಹಾವೇರಿಯ ನವೀನ್ ಸಾವು, ಮತ್ತೊಬ್ಬರಿಗೆ ಗಾಯ, ಸಿಎಂ ಬೊಮ್ಮಾಯಿ ಭಾವುಕ
ಬೆಂಗಳೂರು: ಉಕ್ರೇನ್ ನ ಖಾರ್ಕಿವ್ ನಲ್ಲಿ ರಷ್ಯಾದ ಶೆಲ್ ದಾಳಿಯಲ್ಲಿ ರಾಜ್ಯದ ಹಾವೇರಿಯ ನವೀನ್ ಪ್ರಾಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ನವೀನ್ ಅವರ ಕುಟುಂಬ ನನಗೆ ಗೊತ್ತು. ಅವರು ನನಗೆ ತುಂಬಾ ಹತ್ತಿರವಾಗಿದ್ದಾರೆ. ಪ್ರಧಾನಿ ಮೋದಿ ಅವರು ಕೂಡ ನವೀನ್ ಕುಟುಂಬದವರೊಂದಿಗೆ ಮಾತನಾಡಿದ್ದಾರೆ ಎಂದರು.
ಮೃತದೇಹವನ್ನು ಭಾರತಕ್ಕೆ ತರಲು ನಾವು ಪ್ರಯತ್ನಿಸಿದ್ದು, ನೆರವಿಗಾಗಿ ಪಿಎಂಒ ಮತ್ತು ಎಂಇಎಗೆ ಮನವಿ ಮಾಡಿದ್ದೇನೆ. ಇಬ್ಬರು ವ್ಯಕ್ತಿಗಳು ನವೀನ್ ನೊಂದಿಗೆ ಇದ್ದರು. ಅವರಲ್ಲಿ ಒಬ್ಬರು ಗಾಯಗೊಂಡಿದ್ದಾರೆ. ಅವರೂ ಹಾವೇರಿ ಜಿಲ್ಲೆಯ ಚಳಗೇರಿ ಮತ್ತು ರಾಣೆಬೆನ್ನೂರು ತಾಲೂಕಿನವರು ಎಂದು ಸಿಎಂ ತಿಳಿಸಿದ್ದಾರೆ.
ನವೀನ್ ಕುಟುಂಬದವರು ಗೊತ್ತು ಎಂದು ಹೇಳುವಾಗ ಸಿಎಂ ಗದ್ಗದಿತರಾಗಿದ್ದು, ಮಾತನಾಡಲಾಗದೇ ಭಾವುಕರಾಗಿ ಬಳಿಕ ಮಾತು ಮುಂದುವರೆಸಿದ್ದಾರೆ.