ಸ್ಪಿನ್ ದಿಗ್ಗಜ, ಕ್ರಿಕೆಟ್ ದಂತಕಥೆ ಶೇನ್ ವಾರ್ನ್ ನಿಧನ

ಸ್ಪಿನ್ ದಿಗ್ಗಜ, ಕ್ರಿಕೆಟ್ ದಂತಕಥೆ ಶೇನ್ ವಾರ್ನ್ ನಿಧನ 


ಆಸ್ಟ್ರೇಲಿಯಾದ ಕ್ರಿಕೆಟ್‌ ದಂತಕತೆ ಶೇನ್ ವಾರ್ನ್ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.


ಆಸ್ಟ್ರೇಲಿಯಾದ ಮಾಜಿ ಕ್ರಕೆಟಿಗ ಟೆಸ್ಟ್ ಕ್ರಿಕೆಟ್ʼನ ಎರಡನೇ ಅತ್ಯಂತ ಪ್ರಭಾವಶಾಲಿ ವಿಕೆಟ್ ಟೇಕರ್ ಆಗಿದ್ದು, ಶ್ರೇಷ್ಠ ಬೌಲರ್ʼಗಳಲ್ಲಿ ಒಬ್ಬರಾಗಿದ್ದರು. ಅವರಿಗೆ 52 ವಯಸ್ಸಾಗಿತ್ತು. 


ಆಸ್ಟ್ರೇಲಿಯಾ ಪರ 145 ಟೆಸ್ಟ್‌ ಹಾಗೂ 194 ಏಕದಿನ ಪಂದ್ಯಗಳಲ್ಲಿ ಆಡಿದ್ದ ವಾರ್ನ್‌, ಕ್ರಮವಾಗಿ 708 ಮತ್ತು 293 ವಿಕೆಟ್‌ಗಳನ್ನು ಕಬಳಿಸಿದ್ದರು.


ಐಪಿಎಲ್‌ನಲ್ಲಿ ಆಡುವ ರಾಜಸ್ಥಾನ ರಾಯಲ್ಸ್‌ ತಂಡವನ್ನು ಮೊದಲ ಆವೃತ್ತಿಯ ಟೂರ್ನಿಯಲ್ಲಿ ಮುನ್ನಡೆಸಿದ್ದ ವಾರ್ನ್‌, ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದರು.

Previous Post Next Post