ನಾಳೆ ಮುಹರ್ರಂ ಒಂದು: ಹೊಸ ವರುಷ ಎಲ್ಲರಿಗೂ ಶುಭವನ್ನು ತರಲಿ

ನಾಳೆ ಮುಹರ್ರಂ ಒಂದು: ಹೊಸ ವರುಷ ಎಲ್ಲರಿಗೂ ಶುಭವನ್ನು ತರಲಿ


ಹೊಸ ವರ್ಷದ ಆರಂಭವಾಗಿದ್ದು ಸರ್ವರಿಗೂ ಹೊಸ ವರುಷ ಹರುಷ ತರಲಿ ಎಂದು ಹಾರೈಸುತಿದ್ದೇವೆ. 

ನಾಳೆಯಿಂದ ಮುಹರಂ ಒಂದು. ಧುಲ್ ಹಿಜ್ಜ ಮೂವತ್ತು ಪೂರ್ಣ ಗೊಂಡು ಆಕಾಶದಲ್ಲಿ ಮುಹರ್ರಂ ಚಂದಿರನ ಆಗಮನ. ಇಸ್ಲಾಮಿಕ್ ಕ್ಯಾಲೆಂಡರಿನ ಪ್ರಥಮ ತಿಂಗಳಿನ ಪ್ರಥಮ ದಿನ (ಜುಲೈ 31) ಆಗಿದ್ದು ಇನ್ನು ಹಿಜರಿ ١٤٤٤ (1444) 

ಸರ್ವರಿಗೂ ಹೊಸ ವರ್ಷದ ಶುಭಾಶಯಗಳು. ಜೀವನ ಜಂಜಾಟದಲ್ಲಿ ಸಿಲುಕಿಕೊಂಡ ಸಕಲ ಸಮಸ್ಯೆಗಳಿಗೂ ಪರಿಹಾರವಾಗಲಿ ಮತ್ತು ನಾಡಿನಲ್ಲಿ ಶಾಂತಿ ಸಾಮರಸ್ಯ ನೆಲೆಗೊಳ್ಳಲಿ ಎಂದು ಈ ಸಂದರ್ಭದಲ್ಲಿ ಹಾರೈಸುತ್ತಿದ್ದೇವೆ 

ಕಲುಷಿತಗೊಂಡ ಈ ಸನ್ನಿವೇಶ ಆದಷ್ಟು ಬೇಗ ತಿಳಿಗೊಂಡು ನಾಡಿನಲ್ಲಿ ಶಾಂತಿ ಸಾಮರಸ್ಯ ಸಹೋದರತೆ ಸ್ಥಾಪನೆಯಾಗಲಿ. ಇದು ಹೊಸ ವರ್ಷದ 'ಈಗಿನ ಸುದ್ದಿ'ಯ ಸಂದೇಶ. ಮನಸ್ಸುಗಳಡೆಯಲ್ಲಿನ ಗೋಡೆಗಳನ್ನು ಕೆಡವಿ ಪ್ರೀತಿಯ ಸೇತುವೆ ನಿರ್ಮಿಸೋಣ
Previous Post Next Post