ಪಯಶ್ಶಿ ಉಸ್ತಾದ್ ನಿಧನ: SჄS ತೀವ್ರ ಸಂತಾಪ

ಪಯಶ್ಶಿ ಉಸ್ತಾದ್ ನಿಧನ: SჄS ತೀವ್ರ ಸಂತಾಪ

ಕೇರಳ ಮುಸ್ಲಿಂ ಜಮಾಅತ್ ನಾಯಕ, ಪ್ರಶಸ್ತ ವಾಗ್ಮಿ, ವಿದ್ವಾಂಸ ಅಬ್ದುಲ್ಲತೀಫ್ ಸ‌ಅದಿ ಪಯಶ್ಶಿ (60 ವಯಸ್ಸು) ಇವರ ಅನಿರೀಕ್ಷಿತ ವಿದಾಯವು ಸುನ್ನೀ ಸಮೂಹಕ್ಕೆ ತಾಳಲಾರದ ನಷ್ಟ. ತನ್ನ ಆಕರ್ಷಕ ವಾಗ್ಧೋರಣಿಯಿಂದ ಸಮುದಾಯದ ಲಕ್ಷಾಂತರ ಮಂದಿಗೆ ಧರ್ಮದ ಸಂದೇಶ ತಲುಪಿಸುತ್ತಿದ್ದ ಅವರ ವಿದಾಯದಿಂದ ಸುನ್ನೀ ಚಳವಳಿಯು ಅತ್ಯಂತ ಬಲಿಷ್ಠ ಸಾರಥಿಯೊಬ್ಬರನ್ನು ಕಳೆದು ಕೊಂಡಂತಾಗಿದೆ ಎಂದು ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (SჄS) ತನ್ನ ಸಂತಾಪ ಸಂದೇಶದಲ್ಲಿ ಅಭಿಪ್ರಾಯ ಪಟ್ಟಿದೆ.


ಇಂದು ಅಪರಾಹ್ನ ಕೇರಳದ ಕಣ್ಣೂರಿನಲ್ಲಿ, ಸಿರಾಜ್ ದಿನಪತ್ರಿಕೆಯ ಪ್ರಾದೇಶಿಕ ವ್ಯವಸ್ಥಾಪಕರಾಗಿದ್ದ ಕೆ.ಎಂ.ಬಶೀರ್ ಅವರನ್ನು ತಿರುವನಂತಪುರದಲ್ಲಿ ಕಾರು ಢಿಕ್ಕಿ ಹೊಡೆಸಿ ಕೊಲೆ ಮಾಡಿದ ಆರೋಪ ಎದುರಿಸುತ್ತಿರುವ  ಐ.ಎ.ಎಸ್. ಅಧಿಕಾರಿ ಒಬ್ಬರನ್ನು ಆಲಪ್ಪುಯ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿದ ಕೇರಳ ಸರಕಾರದ ಕ್ರಮವನ್ನು ಖಂಡಿಸಿ ಸುನ್ನೀ ಸಂಘಟನೆಗಳು ನಡೆಸಿದ ಕಲೆಕ್ಟರೇಟ್ ಮಾರ್ಚ್‌ನಲ್ಲಿ ಭಾಷಣ ಮಾಡಿ ಮರಳುವ ಮಧ್ಯೆ ಎದೆನೋವು ಕಾಣಿಸಿಕೊಂಡು ತಕ್ಷಣ ಅವರು ಹೃದಯಾಘಾತದಿಂದ ನಿಧನರಾಗಿದ್ದರು.

ಕೇರಳ ರಾಜ್ಯದ ಎಸ್ಸೆಸ್ಸೆಫ್, ಎಸ್.ವೈ.ಎಸ್.,ಮುಸ್ಲಿಂ ಜಮಾಅತ್, ಜಂಇಯ್ಯತುಲ್ ಉಲಮಾ ಮುಂತಾದ ಎಲ್ಲ ಸಂಘಟನೆಗಳ ರಾಜ್ಯ ಮಟ್ಟದ ನಾಯಕರಾಗಿ ಗುರುತಿಸಲ್ಪಟ್ಟ ಅವರು ದೇಶ ವಿದೇಶಗಳಲ್ಲಿ ಪ್ರಸಿದ್ದರಾಗಿದ್ದರು. ಕೊಡಗು ಜಿಲ್ಲೆಯೊಂದಿಗೆ ಅಭೇದ್ಯ ಸಂಪರ್ಕವನ್ನು ಹೊಂದಿದ್ದರು.
ಅವರ ಜನಾಝ ನಾಳೆ (ಭಾನುವಾರ) ಬೆಳಗ್ಗೆ ಎಂಟು ಗಂಟೆಗೆ ಪಯಶ್ಶಿ ಜುಮಾ ಮಸೀದಿ ಖಬರ್‌‌ಸ್ಥಾನದಲ್ಲಿ ದಫನ ಮಾಡಲಾಗುವುದು ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.

ಮೃತರ ಹೆಸರಲ್ಲಿ ಎಲ್ಲರೂ ಸಾಧ್ಯವಾದಷ್ಟು ಖುರ್‌ಆನ್, ತಹ್‌ಲೀಲ್ ಹದ್ಯಾ ಮಾಡಿ ವಿಶೇಷ ಪ್ರಾರ್ಥನೆ ಮತ್ತು ಮಯ್ಯಿತ್ ನಮಾಝ್ ನಿರ್ವಹಿಸಬೇಕೆಂದು ಎಸ್.ವೈ.ಎಸ್.ರಾಜ್ಯಾಧ್ಯಕ್ಷ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ವಿನಂತಿಸಿಕೊಂಡಿದ್ದಾರೆ.
Previous Post Next Post