ಮಿನಾದಿಂದ ಅರಫಾ ಮೈದಾನದತ್ತ ಸಾಗುತ್ತಿರುವ ಹಜ್ಜಾಜಿಗಳು, ಇಂದು ಅರಫಾ ಸಂಗಮ
ಮಕ್ಕಾ। ಮಿನಾದಲ್ಲಿ ತಂಗಿದ ಹಜ್ಜಾಜ್ ಗಳು ಶುಕ್ರವಾರ ಸುಬಹಿ ನಮಾಝಿನೊಂದಿಗೆ ಅರಫಾ ಮೈದನಾದತ್ತ ತೆರಳಲಿದ್ದಾರೆ. ಲಕ್ಷಾಂತರ ಹಾಜಿಗಳು ಭಾಗವಹಿಸುವ ಹಜ್ಜ್ ನ ಪ್ರಮುಖ ಕರ್ಮ ಅರಫಾ (ಶುಕ್ರವಾರ) ಸಂಗಮ ನಡೆಯಲಿದೆ. ಲಕ್ಷಾಂತರ ಹಾಜಿಗಳು ಅರಫಾ ಮೈದಾನದಲ್ಲಿ ಸಂಗಮಿಸಲಿದ್ದಾರೆ.
ಅರಫಾ ಖುತುಬಕ್ಕೆ ಶೈಖ್ ಡಾಕ್ಟರ್ ಮುಹಮ್ಮದ್ ಬಿನ್ ಅಬ್ದುಲ್ ಕರೀಮ್ ಅಲ್ ಇಝ್ಝ ನೇತೃತ್ವ ನೀಡಲಿದ್ದಾರೆ. ಹಿಜ್ ರ ಹತ್ತನೇ ವರ್ಷದಲ್ಲಿ ಪ್ರವಾದಿ (ಸಅ)ರು ನಡೆಸಿದ ವಿದಾಅ್ ಭಾಷಣವನ್ನು ಸ್ಮರಿಸಿ ಎಲ್ಲಾ ವರ್ಷವು ಮಸ್ಜಿದ್ ಉನ್ನಮಿರಾದಲ್ಲಿ ಅರಫಾ ಖುತುಬಾ ನಡೆಸಲಾಗುತ್ತದೆ.