ನೋಯ್ಡಾದ ಅವಳಿ ಗೋಪುರ ಧ್ವಂಸ: ಒಂಬತ್ತು ಸೆಕೆಂಡುಗಳಲ್ಲಿ ನೆಲಕ್ಕುರುಳಿದ ದೈತ್ಯಾಕಾರದ ಕಟ್ಟಡ
ನೋಯ್ಡಾ: ಇಡೀ ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ನೋಯ್ಡಾದ (Noida) ಬೃಹತ್ ಅವಳಿ ಕಟ್ಟಡ (Big Twins Tower) ನೆಲಸಮವಾಗಿದೆ. 337 ಅಡಿ ಎತ್ತರದ ನೋಯ್ಡಾದ (Noida) ಸೂಪರ್ಟೆಕ್ (Super tech) ಅವಳಿ ಕಟ್ಟಡಗಳ ನೆಲಸಮ (Demolition) ಆಗಿದೆ.ಮಧ್ಯಾಹ್ನ 2.30 ಕ್ಕೆ ಸರಿಯಾಗಿ 3700 ಕೆ.ಜಿ. ಸ್ಟೋಟಕ ಬಳಸಿ ಸೂಪರ್ ಟೆಕ್ ಸಂಸ್ಥೆ ನಿರ್ಮಿಸಿದ್ದ ಅಪೆಕ್ಸ್-ಸಿಯಾನೆ ಅವಳಿ ಕಟ್ಟಡಗಳನ್ನು ನೆಲಕ್ಕುರುಳಿಸಲಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಅಕ್ಕ ಪಕ್ಕದ 5 ಸಾವಿರಕ್ಕೂ ಹೆಚ್ಚು ನಿವಾಸಿಗಳನ್ನು ಸ್ಥಳಾಂತರಿಸಲಾಗಿತ್ತು.
ಉತ್ತರ ಪ್ರದೇಶ ಅಪಾರ್ಟ್ ಮೆಂಟ್ ಕಾಯ್ದೆ ಉಲ್ಲಂಘಿಸಿ ಅಪಾರ್ಟ್ ನಿರ್ಮಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹೌಸಿಂಗ್ ಸೊಸೈಟಿ ನಿವಾಸಿಗಳೇ ಸುಪ್ರೀಂ ಕೋರ್ಟ್ ಮೊರ ಹೋಗಿದ್ದರು. ಕಳೆದ ಹಲವು ವರ್ಷಗಳ ಕಾನೂನು ಸಂಘರ್ಷದ ಬಳಿಕ ಸುಪ್ರೀಂ ಕೋರ್ಟ್ ಕಟ್ಟಡವನ್ನು ನೆಲಸಮಗೊಳಿಸಲು ಆದೇಶ ನೀಡಿತ್ತು.
ಇದು ಜಾಗತಿಕ ಇತಿಹಾಸದಲ್ಲಿಯೇ ಅಪರೂಪದ ಕಾರ್ಯಾಚರಣೆ ಆಗಿದೆ. ನೋಯ್ಡಾದ ಸೆಕ್ಟರ್ 93ಎ ( Noida Sector 93A) ಪ್ರದೇಶದಲ್ಲಿರುವ ಎರಡು ದೊಡ್ಡ ಕಟ್ಟಡಗಳನ್ನು ಕಾನೂನಿನ ನಿಯಮದ ವಿರುದ್ಧವಾಗಿ ನಿರ್ಮಿಸಲಾಗಿತ್ತು. ಹಲವು ವರ್ಷಗಳ ಕಾನೂನು ಹೋರಾಟದ ನಂತರ ಈ ಕಟ್ಟಡಗಳು ಧರೆಗುರುಳಿವೆ.