ಅಬ್ದುಲ್ ಅಝೀಝ್ ಮಿಸ್ಬಾಹಿಗೆ ಝೈನುಲ್ ಮುಹಖ್ಖಿಕೀನ್ ಪುರಸ್ಕಾರ
ಪುತ್ತೂರು : ಉತ್ತರ ಕೇರಳದ ವಿಜ್ಜಾನ ರಂಗದಲ್ಲಿ ಅಭೂತಪೂರ್ವ ಸಾಧನೆಗೈದ ಮುಹಿಮ್ಮಾತುಲ್ ಮುಸ್ಲಿಮೀನ್ ಇದರ ಶಿಲ್ಪಿಯೂ ಸಾತ್ವಿಕರೂ ಪಂಡಿತ ನಾಯಕರೂ ಆದ ಮರ್ಹೂಂ ತ್ವಾಹಿರುಲ್ ಅಹ್ದಲ್ ತಂಗಳ್ ರವರ ಸ್ಮರಣಾರ್ಥ ನೀಡುವ ಝೈನುಲ್ ಮುಹಖ್ಖಿಕೀನ್ ಪುರಸ್ಕಾರ ಧಾರ್ಮಿಕ ಸಾಮಾಜಿಕ ಸಂಘಟನಾ ರಂಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ, ತೈಬಾ ಸೆಂಟರಿನಲ್ಲಿ ಪ್ರಾಂಶುಪಾಲರಾಗಿರುವ ಅಬ್ದುಲ್ ಅಝೀಝ್ ಮಿಸ್ಬಾಹಿಗೆ ನೀಡಲು ತೀರ್ಮಾನಿಸಿರುವುದಾಗಿ ತೈಬಾ ಈಶ್ವರಮಂಗಲ ಇದರ ಯು .ಎ .ಇ . ಸಮಿತಿಯು ತಿಳಿಸಿದೆ.
ತ್ವೈಬಾ ಎಜುಕೇಷನಲ್ ಸೆಂಟರ್ ಇದರ ಹತ್ತನೇ ವಾರ್ಷಿಕದ ಪ್ರಯುಕ್ತ ಆಗಸ್ಟ್ 19,20,21 ರಂದು ನಡೆಯುವ ಕಾರ್ಯಕ್ರಮದ ಸಮಾರೋಪ ಸಮಾರಂಭದಂದು ಪ್ರಮುಖ ಸುನ್ನೀ ನೇತಾರರಾದ ಪೇರೋಡ್ ಅಬ್ದುರಹ್ಮಾನ್ ಸಖಾಫಿ , ಖಲೀಲ್ ಬುಖಾರಿ ತಂಗಳ್ ರವರ ಸಮ್ಮುಖದಲ್ಲಿ ಶೈಖುನಾ ಕಾಂತಪುರಂ ಎ.ಪಿ . ಅಬೂಬಕ್ಕರ್ ಮುಸ್ಲಿಯಾರ್ ರವರು ಪುರಸ್ಕಾರ ನೀಡಿ ಗೌರವಿಸುವುದಾಗಿ ತ್ವೈಬಾ ಯು.ಎ.ಇ ಸಮಿತಿಯು ಶಾರ್ಜಾ ರೋಲಾದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ದಿನಾಂಕ ಆಗಸ್ಟ್ 14 ರಂದು ನಡೆದ ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷರಾದ ಮುಹಮ್ಮದ್ ಕುಂಞಿ ಸಖಾಫಿ ವಹಿಸಿದ್ದರು. ತ್ವೈಬಾ ಯು ಎ ಇ ನಿರ್ದೇಶಕರಾದ ಅಬ್ದುಲ್ ಹಮೀದ್ ಸಅದಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ತ್ವೈಬಾ ಯು ಎ ಇ ಪ್ರ.ಕಾರ್ಯದರ್ಶಿ ಸುಹೈಲ್ ಮದನಿ ಸ್ವಾಗತಿಸಿ ಮುಹಮ್ಮದ್ ಕುಂಞಿ ವಂದಿಸಿದರು.