ಬೆಳ್ತಂಗಡಿ: ಸಫ್ವಾನ್ ಮತ್ತು ಶಫೀಖ್ ನಿಧನಕ್ಕೆ ಎಸ್.ವೈ.ಎಸ್.ತೀವ್ರ
ಸಂತಾಪ
ಇಂದು ಬೆಳಗ್ಗೆ ಕುಪ್ಪೆಟ್ಟಿಯಲ್ಲಿ ನಡೆದ ವಾಹನಾಪಘಾತದಲ್ಲಿ ನಿಧನರಾದ ಮೂರುಗೋಳಿ ಶಾಖಾ ಎಸ್ಸೆಸ್ಸೆಫ್ ಪಬ್ಲಿಕೇಶನ್ ಕಾರ್ಯದರ್ಶಿ ಮುಹಮ್ಮದ್ ಸಫ್‌ವಾನ್ (19) ಹಾಗೂ ಪೂಂಜಾಲಕಟ್ಟೆಯಲ್ಲಿ ಅದೇ ಸಮಯಕ್ಕೆ ನಡೆದ ವಾಹನಾಪಘಾತದಲ್ಲಿ ಮಡಿದ ಸಫ್ವಾನ್‌ನ ತಾಯಿಯ ಅಕ್ಕನ ಮಗ, ಎಸ್ಸೆಸ್ಸೆಫ್ ಕಾರ್ಯಕರ್ತ ಶಫೀಖ್ ಕರಾಯ (20) ಇವರ ನಿಧನಕ್ಕೆ ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಅವರ ಪಾರತ್ರಿಕ ಮೋಕ್ಷ ಮತ್ತು ಕುಟುಂಬದ ಸಹನೆಗಾಗಿ ಎಲ್ಲರೂ ವಿಶೇಷ ಪ್ರಾರ್ಥನೆ ನಡೆಸಲು ಮತ್ತು ಮೃತರ ಹೆಸರಲ್ಲಿ ಮಯ್ಯಿತ್ ನಮಾಝ್ ನಿರ್ವಹಿಸಲು ಎಸ್.ವೈ.ಎಸ್. ರಾಜ್ಯಾಧ್ಯಕ್ಷ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ವಿನಂತಿಸಿಕೊಂಡಿದ್ದಾರೆ.