ಸೈಯದ್ ಝೈನುಲ್ ಆಬಿದೀನ್ ಬಾಫಖಿ ನಿಧನ: ಎಸ್.ವೈ.ಎಸ್.ಸಂತಾಪ
ಮರ್ಕಝು ಸ್ಸಖಾಫತಿ ಸುನ್ನಿಯ್ಯ ಮತ್ತು ರಾಜ್ಯ ಸುನ್ನೀ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್‌ನ ಉಪಾಧ್ಯಕ್ಷರಾಗಿದ್ದ ಸಯ್ಯಿದ್ ಝೈನುಲ್ ಆಬಿದೀನ್ ಬಾಫಖಿ ತಂಙಳ್ (82) ಅವರ ನಿಧನಕ್ಕೆ ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಅಧ್ಯಕ್ಷರೂ ಸಮಸ್ತ ಮುಶಾವರದ ಖಾಯಂ ಆಹ್ವಾನಿತರೂ ಆಗಿದ್ದ ಸಯ್ಯಿದ್ ಅಬ್ದುರ್ರಹ್ಮಾನ್ ಬಾಫಖಿ ತಂಙಳ್ ಅವರ ಪುತ್ರರಾಗಿ 1941 ಮಾರ್ಚ್ ಹತ್ತರಂದು ಜನಿಸಿದ ತಂಙಳ್ 30 ವರ್ಷಗಳ ಕಾಲ ಮಲೇಷ್ಯಾದಲ್ಲಿ ಸೇವೆ ಸಲ್ಲಿಸಿದ್ದು, ಮಲೇಷ್ಯಾ ತಂಙಳ್ ಎಂದೇ ಪ್ರಸಿದ್ಧರಾಗಿದ್ದರು.ಇವರು 90 ರಾಷ್ಟ್ರಗಳಿಗೆ ಭೇಟಿ ನೀಡಿದ್ದಾರೆ.
ಅವರ ಹೆಸರಲ್ಲಿ ಎಲ್ಲ ಕಡೆಗಳಲ್ಲಿ ಮಯ್ಯಿತ್ ನಮಾಝ್ ಹಾಗೂ ವಿಶೇಷ ದುಆ ನಡೆಸುವಂತೆ ರಾಜ್ಯಾಧ್ಯಕ್ಷ ಡಾ. ಎಮ್ಮೆಸ್ಸೆಂ. ಝೈನೀ ಕಾಮಿಲ್ ವಿನಂತಿಸಿದ್ದಾರೆ.