ಇಂದು ಮಂಗಳೂರಿಗೆ ಮೋದಿ: ನಿಮ್ಮ ಪ್ರಯಾಣದ ರಸ್ತೆಯನ್ನು ಹೀಗೆ ಬದಲಿಸಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳೂರು ಭೇಟಿ ಹಿನ್ನೆಲೆ ರಸ್ತೆ ಸಂಚಾರದಲ್ಲಿ ಹಲವು ಮಹತ್ವದ ಬದಲಾವಣೆ ಮಾಡಲಾಗಿದೆ. ಪ್ರಧಾನ ಮಂತ್ರಿಗಳು ಸಂಚರಿಸುವ ಮಾರ್ಗದಲ್ಲಿ ಇಂದು ಬೆಳಿಗ್ಗೆ 6 ಗಂಟೆಯಿಂದಲೇ ಎಲ್ಲಾ ಬಗೆಯ ಘನ , ಸರಕು ಹಾಗೂ ಸಾರ್ವಜನಿಕ ವಾಹನಗಳ ಓಡಾಟ ನಿಷೇಧಿಸಿ ಆದೇಶಿಸಲಾಗಿದೆ. ಇಂದು ಮಂಗಳೂರು ನಗರಕ್ಕೆ ಆಗಮಿಸುವವರು ಮಾರ್ಗ ಬದಲಾವಣೆಯನ್ನು ಗಮನಿಸಬೇಕಿದೆ. ಮಂಗಳೂರು ನಗರ ಹಾಗೂ ವಿಮಾನ ನಿಲ್ದಾಣ ಮತ್ತು ಮಡಿಕೇರಿ, ಪುತ್ತೂರು, ಬೆಂಗಳೂರು, ಮೈಸೂರು ತೆರಳುವವರು ಈ ಮಾರ್ಗಗಳನ್ನು ಬಳಸಬಹುದಾಗಿದೆ. ನಿಮ್ಮ ಪಯಣವು ಸುದೀರ್ಘ ಆಗುವ ಸಾಧ್ಯತೆ ಇರುವುದರಿಂದ ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಹೊರಟಲ್ಲಿ ಅಷ್ಟೇನೂ ಸಮಸ್ಯೆಯಾಗದು.
ಪ್ರಧಾನ ಮಂತ್ರಿಗಳು ಸಂಚರಿಸುವ ಮಾರ್ಗ ಹೀಗಿದೆ: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಂಜಾರು) - ಮರಕಡ - ಕಾವೂರು - ಬೋಂದೆಲ್ - ಯೆಯ್ಯಾಡಿ - ಕೆಪಿಟಿ - ಕೊಟ್ಟಾರ ಚೌಕಿ - ಕೂಳೂರು - ಎನ್‌ಎಂಪಿಎ
ಟ್ರಾಫಿಕ್ ಬದಲಾವಣೆ ಹೀಗಿದೆ.
1. ಉಡುಪಿಯಿಂದ ಆಗಮಿಸುವ ಘನ ಹಾಗೂ ಗೂಡ್ಸ್ ವಾಹನಗಳು ಉಡುಪಿ - ಪಡುಬಿದ್ರಿ ಜಂಕ್ಷನ್ - ಕಾರ್ಕಳ - ಬೆಳ್ಮಣ್ ಮಾರ್ಗವಾಗಿ ಮೂಡಿಬಿದ್ರೆ ಮೂಲಕ ಮಂಗಳೂರು, ಬಂಟ್ವಾಳ, ಮೆಲ್ಕಾರ್, ಮುಡಿಪು, ತೊಕ್ಕೊಟ್ಟು, ಪುತ್ತೂರು, ಬೆಂಗಳೂರು, ಮಡಿಕೇರಿ, ಮೈಸೂರು ತೆರಳುವುದು.
ಇನ್ನು ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರ ವಾಹನಗಳು ರಾಷ್ಟ್ರೀಯ ಹೆದ್ದಾರಿಯ ಉಡುಪಿ - ಪಡುಬಿದ್ರಿ - ಮುಲ್ಕಿ ನಂತರ ರಾಜ್ಯ ಹೆದ್ದಾರಿ ಕಿನ್ನಿಗೋಳಿ - ಮೂರು ಕಾವೇರಿ - ಕಟೀಲು - ಬಜ್ಪೆ - ಕೈಕಂಬ - ಗುರುಪುರ ಮಾರ್ಗವಾಗಿ ಸಾಗುವುದು. ಇದೇ ವೇಳೆ ಮೂಡುಬಿದ್ರಿ ತೆರಳುವ ವಾಹನ ಸವಾರರು ಮೂರು ಕಾವೇರಿ ನಂತರ ಮೂಡಬಿದ್ರಿ, ಬಂಟ್ವಾಳ ಭಾಗಗಳಿಗೆ ತೆರಳುವುದು.
2. ಸುರತ್ಕಲ್ ನಿಂದ ಮಂಗಳೂರು ನಗರಕ್ಕೆ ಸುರತ್ಕಲ್ ನಿಂದ ಮಂಗಳೂರು ನಗರಕ್ಕೆ ಆಗಮಿಸುವವರು ವಾಹನ ಸವಾರರು ಯಾವುದೇ ಕಾರಣಕ್ಕೂ ರಾಷ್ಟ್ರೀಯ ಹೆದ್ದಾರಿ ಬಳಸುವಂತಿಲ್ಲ. ಹಾಗಾಗಿ, ಈ ಮಾರ್ಗವನ್ನು ಕಡ್ಡಾಯವಾಗಿ ಅನುಸರಿಸುವುದಾಗಿದೆ. ಸುರತ್ಕಲ್ - ಕಾನ - ಜೋಕಟ್ಟೆ - ಪೊರ್ಕೋಡಿ ರಸ್ತೆ - ಬಜ್ಪೆ - ಕೈಕಂಬ - ಗುರುಪುರ ಮಾರ್ಗವಾಗಿ ಮಂಗಳೂರು, ಮೂಡಬಿದ್ರಿ ಹಾಗೂ ಬಂಟ್ವಾಳ ಕಡೆಗೂ ತೆರಳುವುದಾಗಿದೆ.
3. ಇನ್ನು ಉಳ್ಳಾಲ, ತಲಪಾಡಿಯಿಂದ ಸುಳ್ಯ, ಬೆಂಗಳೂರು, ಮೈಸೂರು ತೆರಳುವವರು ಈ ಮಾರ್ಗವನ್ನು ಅನುಸರಿಸುವುದು ತಲಪಾಡಿ, ಉಳ್ಳಾಲ - ಕೆ.ಸಿ. ರೋಡ್ - ತೊಕ್ಕೊಟ್ಟು ಮುಡಿಪು ಮಾರ್ಗವಾಗಿ ಬಿಸಿ ರೋಡ್ ಕಡೆ ಸಂಚರಿಸಿ ಬಳಿಕ ಹೆದ್ದಾರಿಯಲ್ಲಿ ತೆರಳಬಹುದಾಗಿದೆ.