ಬ್ರಿಟನ್ ರಾಣಿ ಎಲಿಜಬೆತ್-II ಅಂತ್ಯಕ್ರಿಯೆ ನಾಳೆ: ಬ್ರಿಟನ್ ತಲುಪಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಬ್ರಿಟನ್ ರಾಣಿ ಎಲಿಜಬೆತ್-II ಅಂತ್ಯಕ್ರಿಯೆ ನಾಳೆ: ಬ್ರಿಟನ್ ತಲುಪಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಲಂಡನ್ : ಸೆಪ್ಟೆಂಬರ್ 19 ರಂದು ನಡೆಯಲಿರುವ ಬ್ರಿಟನ್ ರಾಣಿ ಎಲಿಜಬೆತ್-II ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಶನಿವಾರ ಸಂಜೆ ಲಂಡನ್ ಗೆ ಆಗಮಿಸಿದ್ದಾರೆ.


ಖಾಸಗಿ ವಿಮಾನದಲ್ಲಿ ಇಂಗ್ಲೆಂಡ್‍ಗೆ ತೆರಳಿದ್ದ ದ್ರೌಪದಿ ಮುರ್ಮು, ಭಾರತದ ಪರವಾಗಿ ರಾಜಮನೆತನಕ್ಕೆ ಸಂತಾಪ ಸೂಚಿಸಲಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ದ್ರೌಪದಿ ಮುರ್ಮು ಲಂಡನ್‍ನಲ್ಲಿ ರಾಣಿ ಎಲಿಜಬೆತ್-II ಅವರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದೇನೆ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.

ಸೆಪ್ಟೆಂಬರ್ ೮ ರಂದು ಸ್ಕಾಟ್ಲೆಂಡ್ ನ ಬಾಲ್ಮೋರಲ್ ಕ್ಯಾಸಲ್‌ ನಲ್ಲಿರುವ ನಿವಾಸದಲ್ಲಿ 96 ವರ್ಷ ವರ್ಷದ ರಾಣಿ ಎಲಿಜಬೆತ್‌ ನಿಧನರಾಗಿದ್ದರು.

ನಾಳೆ (ಸೆಪ್ಟೆಂಬರ್ 19) ಬೆಳಿಗ್ಗೆ ವೆಸ್ಟ್‌ಮಿನ್‌ಸ್ಟರ್‌ ಅಬ್ಬೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

Previous Post Next Post