ಫೆಬ್ರವರಿ ಐದು- ಚಿತ್ರದುರ್ಗದ ಸಿಬಾರ ಇಹ್ಸಾನ್ ನಾಲೆಜ್ ವಿಲೇಜ್ ನಲ್ಲಿ ಗ್ರಾಂಡ್ ಅಸೆಂಬ್ಲಿ

ಫೆಬ್ರವರಿ ಐದು- ಚಿತ್ರದುರ್ಗದ ಸಿಬಾರ ಇಹ್ಸಾನ್ ನಾಲೆಜ್ ವಿಲೇಜ್ ನಲ್ಲಿ ಗ್ರಾಂಡ್ ಅಸೆಂಬ್ಲಿ

ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿಯ ಅಲೆಯೆನ್ನೆಬ್ಬಿಸುತ್ತಿರುವ ಇಹ್ಸಾನ್ ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ ತನ್ನ ಕಾರ್ಯಾಚರಣೆಯನ್ನು ಮಾಡುತ್ತಿದೆ.

ಸುಮಾರು ಅರವತ್ತರಷ್ಟು ಹನಫೀ ಶಾಫಿ ದಾಇಗಳಿಂದ ದಅವ ಕಾರ್ಯಾಚರಣೆ ನಡೆಯುತಿದ್ದು ಸಾವಿರಾರು ವಿದ್ಯಾರ್ಥಿಗಳು ವಿದ್ಯೆ ಕಲಿಯುತಿದ್ದಾರೆ. ಇನ್ನೂರರಷ್ಟು ಮುತಅಲ್ಲಿಮ್ ಗಳು ಊಟ ವಸತಿ ಸಹಿತ ವಿವಿಧ ಸಂಸ್ಥೆಗಳಲ್ಲಿ ವಿದ್ಯಾರ್ಜನೆಗೈಯುತ್ತಿದ್ದಾರೆ. 
ಮದರಸ ಶಿಕ್ಷಣ ಹೊರತುಪಡಿಸಿ ಫೀಲ್ಡ್ ವರ್ಕ್ ಗಳು, ಹಳ್ಳಿ ದಅವ, ಯೂತ್ ಕ್ಲಾಸ್, ಮಹಿಳಾ ತರಗತಿಗಳು, ಸಮ್ಮರ್ ಕ್ಯಾಂಪ್ ಗಳು, ಸಂಘಟನಾ ಚಟುವಟಿಕೆಗಳು, ಆಧ್ಯಾತ್ಮಿಕ ಮಜ್ಲಿಸ್ ಗಳು ಕೂಡ ನಡೆದು ಬರುತ್ತಿದೆ. ವಿವಿಧ ಜಿಲ್ಲೆಗಳಲ್ಲಿ ವಿವಿಧ ಸಂಸ್ಥೆಗಳು ನಡೆದು ಬರುತ್ತಿದ್ದು, ಚಿತ್ರದುರ್ಗದ ಸಿಬಾರದಲ್ಲಿ ಇಹ್ಸಾನ್ ಹಯಾ ಹುಸೈನ್ ಓರಿಫಿ ನಾಲೇಜ್ ವಿಲೇಜ್, ಹರಿಹರದ ದಾರುಲ್ ಇಹ್ಸಾನ್ ಎಜುಕೇಶನ್ ಸೆಂಟರ್, ಜಗಳೂರಿನ ಮಾಝಿನ್ ಹೆರಿಟೇಜ್ ಸಂಸ್ಥೆ, ಕೊಪ್ಪಳದ ಕಾರಟಗಿಯ ಇಹ್ಸಾನ್ ಫ್ಯೂಚರ್ ಅಕಾಡೆಮಿ ಸಂಸ್ಥೆಗಳು ಹಾಗು ಶಿವಮೊಗ್ಗ, ರಾಣೆಬೆನ್ನೂರು, ಲಕ್ಷ್ಮೇಶ್ವರ ಕಲ್ಚರಲ್ ಸೆಂಟರ್, ಗದಗ, ಚಿತ್ರದುರ್ಗ, ಹಿರಿಯೂರು, ಹುಬ್ಬಳ್ಳಿ, ಗಂಗಾವತಿ, ರಾಯಚೂರು, ಬಳ್ಳಾರಿ, ತುಮಕೂರು, ಆಂದ್ರದ ಹೊಳಗುಂದ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಮಕ್ತಬಗಳು ನಡೆದು ಬರುತ್ತಿದೆ. 

ಇಹ್ಸಾನ್ ನ ವಿವಿಧ ಸಂಸ್ಥೆಗಳಲ್ಲಿ  ಕಲಿತ ಮಕ್ಕಳು ಧಾರ್ಮಿಕ ಮತ್ತು ಲೌಕಿಕ ರಂಗದಲ್ಲಿ ವಿವಿಧ ಸ್ಥಳಗಳಲ್ಲಿ ಉನ್ನತ ವಿದ್ಯಬ್ಯಾಸ ಕರಗತ ಮಾಡುತಿದ್ದು, ಮಕ್ತಬಗಳಲ್ಲಿ ಅಲಿಫ್ ಕಲಿತ ವಿದ್ಯಾರ್ಥಿಗಳು ಈಗ ನಿರರ್ಗಳವಾಗಿ ತಜ್ವೀದ್ ನೊಂದಿಗೆ ಖುರ್ ಆನ್ ಪಾರಯಣ ಮಾಡುತಿದ್ದಾರೆ. ಇದಾಗಿದೆ ಇಹ್ಸಾನ್ ನ ಔಟ್ ಪುಟ್.

ತಿಂಗಳಿಗೆ ಲಕ್ಷಗಟ್ಟಲೆ ಖರ್ಚು ಬರುವ ನಮ್ಮ ಕಾರ್ಯಾಚರಣೆಗೆ ಕೆಸಿಎಫ್ ಕಾರ್ಯಕರ್ತರ ಬೆವರ ಹನಿಯಾಗಿದೆ ಬ್ಯಾಕ್ ಪವರ್. ದಾಇಗಳ ಮತ್ತು ಹಳ್ಳಿಗಳ ಮುಗ್ಧ ಜನರ ದುಆ ಮಾತ್ರ ನಿರೀಕ್ಷಿಸಿ ಕೆಸಿಎಫ್ ಕಾರ್ಯಕರ್ತರು ನೀಡುತ್ತಿರುವ ಸಹಾಯ ಸಹಕಾರಗಳು ಅಲ್ಲಾಹನು ಖಬೂಲ್ ಮಾಡಲಿ - ಆಮೀನ್

ಇದೇ ಬರುವ ಫೆಬ್ರವರಿ ಐದರಂದು ಭಾನುವಾರ ಚಿತ್ರದುರ್ಗದ ಸಿಬಾರ ಇಹ್ಸಾನ್ ನಾಲೆಜ್‌ ವಿಲೇಜ್ ನಲ್ಲಿ KCF ಡೇ ಪ್ರಯುಕ್ತ ಬೃಹತ್ ಅಸೆಂಬ್ಲಿ ಆಯೋಜಿಸಲಾಗಿದ್ದು ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕಾರ್ಯಾಚರಿಸುವ ಇಹ್ಸಾನ್ ಸೆಂಟರ್ ಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಉಲಮಾ ಸಾದಾತುಗಳು ಹಾಗು ಇಹ್ಸಾನ್ ಕರ್ನಾಟಕ, ಕೆಸಿಎಫ್ ಐ ಎನ್ ಸಿ ನಾಯಕರು ಮತ್ತು ಇಹ್ಸಾನ್ ದಾಇಗಳು ಸಾಥ್ ನೀಡಲಿದ್ದಾರೆ.

ಉತ್ತರದಲ್ಲಿ ದಾಇಗಳು ಅಹರ್ನಿಶಿ ದೀನಿ ಖಿದ್ಮತ್ ಮಾಡುತ್ತಿರುವಾಗ ಅವರ ಹಿಂದಿರುವ ಶಕ್ತಿ ಕೆಸಿಎಫ್ ಕಾರ್ಯಕರ್ತರಾಗಿದ್ದಾರೆ. ತನ್ನ ಕುಟುಂಬವನ್ನು ದಡ ಸೇರಿಸಲು ಮರಳು ಭೂಮಿಯ ಸುಡು ಬಿಸಿಲಿನಲ್ಲಿ ಕಷ್ಟ ಪಡುತ್ತಿರುವ ಅವರು ತನ್ನ ಸಂಪಾದನೆಯ ಒಂದು ಪಾಲನ್ನು ಉತ್ತರದ ಮುಗ್ಧ ಮುಅ್ ಮಿನ್ ಗಳಿಗಾಗಿ ಮೀಸಲಿಡುತ್ತಿದ್ದಾರೆ. ಅಲ್ಲಾಹನು ಖಬೂಲ್ ಮಾಡಲಿ ಆಮೀನ್ ಎಂದು ಪ್ರಾರ್ಥಿಸುತ್ತಾ ಸರ್ವ ಅನಿವಾಸಿ ಕನ್ನಡಿಗರಿಗೂ ಮುಂಗಡವಾಗಿ ಕೆಸಿಎಫ್ ಡೇ ಶುಭಾಶಯಗಳನ್ನು ಸಲ್ಲಿಸುತ್ತಿದ್ದೇವೆ.
________________________________
🖊️MSM ಜುನೈದ್ ಹಿಮಮಿ ಸಖಾಫಿ ಚಿತ್ರದುರ್ಗ (ಇಹ್ಸಾನ್ ದಾಈ ಚಿತ್ರದುರ್ಗ, ಸದಸ್ಯರು SSF ರಾಜ್ಯ ಸಮಿತಿ)
posted - 27/01/2023_ ಚಿತ್ರದುರ್ಗ
Previous Post Next Post