ನಾಳೆ ಚಿತ್ರದುರ್ಗದಲ್ಲಿ ಇಹ್ಸಾನ್ ಕರ್ನಾಟಕ ಗ್ರಾಂಡ್ ಅಸೆಂಬ್ಲಿ

ನಾಳೆ ಚಿತ್ರದುರ್ಗದಲ್ಲಿ ಇಹ್ಸಾನ್ ಕರ್ನಾಟಕ ಗ್ರಾಂಡ್ ಅಸೆಂಬ್ಲಿ  
ಚಿತ್ರದುರ್ಗ: ಇಹ್ಸಾನ್ ಕರ್ನಾಟಕ ಗ್ರಾಂಡ್ ಅಸೆಂಬ್ಲಿ ನಾಳೆ (05/02/2023) ಬೆಳಿಗ್ಗೆ ಹನ್ನೊಂದರಿಂದ ಚಿತ್ರದುರ್ಗದ ಸಿಬಾರ ಇಹ್ಸಾನ್ ನಾಲೆಜ್‌ ವಿಲೇಜ್ ನಲ್ಲಿ ನಡೆಯಲಿದೆ. ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಅರಿವಿನ ಔತನ ನೀಡುತ್ತಿರುವ ಇಹ್ಸಾನ್ ಕರ್ನಾಟಕ ವಿವಿಧ ಮದ್ರಸ ಮಕ್ಕಳ ಸಂಗಮ ಮತ್ತು ಅಸೆಂಬ್ಲಿ ನಡೆಯಲಿದ್ದು ಖುರ್ರತುಸ್ಸಾದಾತ್ ಸಯ್ಯದ್ ಫಝಲ್ ಅಲ್ ಬುಖಾರಿ ನೇತೃತ್ವ ನೀಡಲಿದ್ದಾರೆ. 
ಝೈನುಲ್ ಉಲಮಾ ಮಾಣಿ ಉಸ್ತಾದ್, ಮುಫ್ತಿ ಅನ್ವರಲಿ ಸಾಬ್, ಹಝ್ರತ್ ಫಾಝಿಲ್ ರಝ್ವಿ ಕಾವಲ್ಕಟ್ಟೆ, ಶಾಫಿ ಸಅದಿ, ಸಯ್ಯದ್ ಇಸ್ಮಾಇಲ್ ಹಾದಿ ತಙಳ್, ಡಾ. ಝೈನೀ ಕಾಮಿಲ್, ಡಿಪಿ ಯೂಸುಫ್ ಸಖಾಫಿ ಬೈತಾರ್, ಇಕ್ಬಾಲ್ ಕಾಜೂರ್ ಸೇರಿದಂತೆ ಕೆಎಂಜೆ, ಎಸ್ ವೈ ಎಸ್, ಎಸ್ಸೆಸ್ಸೆಫ್, ಕೆಸಿಎಫ್ ನಾಯಕರು ಭಾವಗವಹಿಸಲಿದ್ದಾರೆ.

Previous Post Next Post