ನಾಳೆ ರಾಹುಲ್ ಗಾಂಧಿ ಜೋತೆ ಮತ್ತೊಂದು ಸುತ್ತಿನ ಮಾತುಕತೆ: ನಾಳೆನೇ ಕರ್ನಾಟಕ ಸಿಎಂ ಘೋಷಣೆ ಸಾದ್ಯತೆ

ನಾಳೆ ರಾಹುಲ್ ಗಾಂಧಿ ಜೋತೆ ಮತ್ತೊಂದು ಸುತ್ತಿನ ಮಾತುಕತೆ: ನಾಳೆನೇ ಕರ್ನಾಟಕ ಸಿಎಂ ಘೋಷಣೆ ಸಾದ್ಯತೆ
ವದೆಹಲಿ(ಮೇ.16): ಕರ್ನಾಟಕ ಸಿಎಂ ಆಯ್ಕೆ ಕಾಂಗ್ರೆಸ್ ಹೈಕಮಾಂಡ್‌ಗೆ ಇನ್ನಿಲ್ಲದ ತಲೆನೋವು ತಂದಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಜೊತೆ ಪ್ರತ್ಯೇಕ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. 

ಸಿದ್ದರಾಮಯ್ಯ ಜೊತೆ ಒಂದೂವರೆ ಗಂಟೆಗಳ ಕಾಲ ಚರ್ಚೆ ನಡೆಸಲಾಗಿದೆ. ಆದರೆ ಒಮ್ಮತ ಮೂಡದ ಕಾರಣ ನಾಳೆ ರಾಹುಲ್ ಗಾಂಧಿ ಜೊತೆ ಮಲ್ಲಿಕಾರ್ಜುನ ಖರ್ಗೆ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ. ಈ ಸಭೆ ಬಳಿಕ ಬೆಂಗಳೂರಿನಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಈ ಸಭೆಯಲ್ಲಿ ನೂತನ ಸಿಎಂ ಹೆಸರು ಘೋಷಣೆಯಾಗಲಿದೆ ಎಂದು ಮೂಲಗಳು ಹೇಳಿವೆ.


ನಾಳೆ  ರಾಹುಲ್‌ ಗಾಂಧಿ ಜೊತೆ ಮತ್ತೊಂದು ಸುತ್ತು ಮಾತುಕತೆ ನಡೆಯಲಿದ್ದು ಸಿಎಂ ಆಯ್ಕೆ ನಾಳೆ ಆಗಲಿದೆ ಎಂದು ತಿಳಿದು ಬಂದಿದೆ. 

Previous Post Next Post