ಇಂದು ಸಂಜೆ ಆರು ಗಂಟೆಗೆ ಕರ್ನಾಟಕದ ನೂತನ ಸಿಎಂ ಅಧಿಕೃತ ಘೋಷಣೆ; ಎಲ್ಲಾ ಶಾಸಕರು ಬೆಂಗಳೂರಿಗೆ ಬರಲು ಸೂಚನೆ

ಇಂದು ಸಂಜೆ ಆರು ಗಂಟೆಗೆ ಕರ್ನಾಟಕದ ನೂತನ ಸಿಎಂ ಅಧಿಕೃತ ಘೋಷಣೆ; ಎಲ್ಲಾ ಶಾಸಕರು ಬೆಂಗಳೂರಿಗೆ ಬರಲು ಸೂಚನೆ
ಬೆಂಗಳೂರು : ಇಂದು ಸಂಜೆ 6 ಗಂಟೆಗೆ ರಾಜ್ಯದ ನೂತನ ಸಿಎಂ ಅಧಿಕೃತ ಘೋಷಣೆಯಾಗಲಿದ್ದು, ಎಲ್ಲಾ ಶಾಸಕರು ಬೆಂಗಳೂರಿಗೆ ಬರಲು ಹೈಕಮಾಂಡ್ ಸೂಚನೆ ನೀಡಿದೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಸಂಜೆ 6 ಗಂಟೆಗೆ ಮುಂದಿನ ಸಿಎಂ ಯಾರು ಎಂಬುದನ್ನು ಅಧಿಕೃತ ಘೋಷಣೆ ಮಾಡಲಿದ್ದಾರೆ.

ನಾಳೆ ಕರ್ನಾಟಕದ ನೂತನ ಸಿಎಂ ಆಗಿ ಸಿದ್ದರಾಮಯ್ಯ ಅಧಿಕಾರ ಸ್ವೀಕಾರ ಮಾಡುವುದು ಬಹುತೇಕ ಫಿಕ್ಸ್‌ ಆಗಿದ್ದು, ಈ ನಡುವೆ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಸಕಲ ಸಿದ್ದತೆಯನ್ನು ನಡೆಸಲಾಗುತ್ತಿದೆ.

ಈಗಾಗಲೇ ವೇದಿಕೆ ಸಿದ್ದತೆ ಕಾರ್ಯಕ್ರಮ, ಪೆಂಡಲ್. ಕುರ್ಚಿಯನ್ನು ಹಾಕಲಾಗುತ್ತಿದೆ. ಸ್ಥಳಕ್ಕೆ ಹಿರಿಯ ಪೋಲಿಸ್‌ ಅಧಿಕಾರಿಗಳು ಕೂಡ ಆಗಮಿಸಿದ್ದು, ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ, ಎಲ್ಲ ಸಿದ್ದತೆಯನ್ನು ನಡೆಸಲಾಗುತ್ತಿದೆ. ಟ್ರಾಫೀಕಸ್‌ ಸೇರಿದಂತೆ ಎಲ್ಲ ವ್ಯವಸ್ಥೆಯನ್ನು ನೋಡಿಕೊಳ್ಳಲಾಗುತ್ತಿದದ್ದು, ಇಂದು ಸಂಜೆ ಟ್ರಾಫಿಕ್ ಬದಲಿ ಮಾರ್ಗವನ್ನು ಕೂಡ ಬೆಂಗಳೂರು ಟ್ರಾಫಿಕ್‌ ವಿಭಾಗವು ಮಾಹಿತಿ ನೀಡಲಾಗಿದೆ. ಈ ನಡುವೆ ಇಂದು ಸಂಜೆ ACCಯಿಂದ ಮಹತ್ವದ ಸುದ್ದಿಗೋಷ್ಠಿಯನ್ನು ಕರೆದಿದ್ದು, ಇಂದು ಸಿಎಂ ಯಾರು ಎನ್ನುವುದನ್ನು ತಿಳಿಸಲಿದ್ದಾರೆ. ಅಲ್ಲಿಗೆ ಕಳೆದ ನಾಲ್ಕು ದಿನದಿಂದ ನಡೆಯುತ್ತಿದ್ದ ಸಿಎಂ ರೇಸ್ ಕೊನೆಯಾಗಲಿದೆ.

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಹೆಸರು ಅಧಿಕೃತವಾಗಿ ಘೋಷಣೆ ಸಾಧ್ಯತೆ ಹಿನ್ನೆಲೆ ಡಿಕೆಶಿ ತವರು ಜಿಲ್ಲೆ ರಾಮನಗರದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಸಂಜೆ ಸಿದ್ದರಾಮಯ್ಯ ಹೆಸರು ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಹಿನ್ನೆಲೆ ಅಲರ್ಟ್ ಆಗಿರಲು ರಾಮನಗರ ಪೊಲೀಸರಿಗೆ ಸೂಚನೆ ನೀಡಲಾಗಿದೆ, ಬೆಂಗಳೂರು ಮೈಸೂರಿನಿಂದ 6 ಕೆಎಸ್ ಆರ್ ಪಿ ತುಕಡಿ ನಿಯೋಜನೆ ಮಾಡಲಾಗಿದೆ.ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ಡಿಕೆಶಿಗೆ ಸಿಎಂ ಸ್ಥಾನ ತಪ್ಪಿ ಗಲಾಟೆ ನಡೆಯುವ ಹಿನ್ನೆಲೆ ರಾಮನಗರದಲ್ಲಿ ಖಾಕಿ ಸರ್ಪಗಾವಲು ಹಾಕಲಾಗಿದೆ.

Previous Post Next Post