ಸಂಧಾನ ಸಫಲ, ಪಟ್ಟು ಸಡಿಲಿಸಿದ ಬಂಡೆ

ಸಂಧಾನ ಸಫಲ, ಪಟ್ಟು ಸಡಿಲಿಸಿದ ಬಂಡೆ


ದೆಹಲಿ: ಕರ್ನಾಟಕದ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್ ಅವರ ಹೆಸರು ಫಿಕ್ಸ್ ಆಗಿದ್ದು, ಕಾಂಗ್ರೆಸ್ ಹೈಕಮಾಂಡ್ ನಿಂದ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ ಎನ್ನಲಾಗಿದೆ. ತಡರಾತ್ರಿ ನಡೆದ ಸಭೆಯ ಬಳಿಕ ಡಿಕೆಶಿ ಪಟ್ಟು ಸಡಿಲಿಸಿದ್ದು 30-30 ಸೂತ್ರಕ್ಕೆ ಒಪ್ಪಿದ್ದಾರೆ. ಇಂದು ಸಂಜೆ ಏಳಕ್ಕೆ ಸಿಎಲ್ ಪಿ ಸಭೆ ಬೆಂಗಳೂರಿನಲ್ಲಿ ನಡೆಯಲಿದೆ. ಮೇ 20 ಕ್ಕೆ ಪ್ರಮಾಣವಚನ ಕಾರ್ಯಕ್ರಮ ಬೆಂಗಳೂರಿನ ಕಂಠೀರವ ಸ್ಟೇಡಿಯಂ ನಲ್ಲಿ ಫಿಕ್ಸ್ ಆಗಿದೆ.

Previous Post Next Post