ಕರ್ನಾಟಕ ವಖಫ್ ಮಂಡಳಿ ಅಧ್ಯಕ್ಷರಾಗಿ ಅನ್ವರ್ ಪಾಷಾ ಚಿತ್ರದುರ್ಗ ಆಯ್ಕೆ
ಚಿತ್ರದುರ್ಗ: ಈ ಹಿಂದಿನ ಅಧ್ಯಕ್ಷರಾದ ಶಾಫಿ ಸಅದಿ ಅವರ ರಾಜೀನಾಮೆಯಿಂದ ತೆರವಾಗಿದ್ದ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ಅನ್ವರ್ ಬಾಷ ಒಬ್ಬರೇ ನಾಮಪತ್ರ ಸಲ್ಲಿಸಿದ್ದು ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧಿಕೃತವಾಗಿ ನಾಳೆ ಚುನಾವಣಾಧಿಕಾರಿ ಇವರ ಆಯ್ಕೆಯನ್ನು ಘೋಷಣೆ ಮಾಡಲಿದ್ದಾರೆ.
ಮೂಲತಃ ಚಿತ್ರದುರ್ಗ ಜಿಲ್ಲೆಯವರಾದ ಅನ್ವರ್ ಬಾಷ, ವಕ್ಫ್ ಬೋರ್ಡ್ ನ ಮುತವಲ್ಲಿ ವಿಭಾಗದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಇದೇ ಮೊದಲ ಬಾರಿಗೆ ವಕ್ಫ್ ಬೋರ್ಡ್ ಸದಸ್ಯರಾಗಿ ಚುನಾಯಿತರಾಗಿದ್ದ ಅನ್ವರ್ ಬಾಷ, ಇದೀಗ ವಕ್ಫ್ ಬೋರ್ಡ್ ನ ನೂತನ ಅಧ್ಯಕ್ಷರಾಗಿ ನಿಯೋಜಿತರಾಗಿದ್ದಾರೆ.
ನಿಯೋಜಿತ ಅಧ್ಯಕ್ಷರಾಗಿರುವ ಅನ್ವರ್ ಬಾಷ ಅವರಿಗೆ ವಸತಿ ಸಚಿವ ಝಮೀರ್ ಅಹಮದ್ ಖಾನ್, ಪೌರಾಡಳಿತ ಸಚಿವ ರಹೀಮ್ ಖಾನ್,ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಮಾಜಿ ಸಚಿವ ತನ್ವೀರ್ ಸೇಠ್, ಪರಿಷತ್ ಸದಸ್ಯ ಜಬ್ಬಾರ್ ಖಾನ್, ಶಾಸಕರಾದ ಎನ್. ಎ. ಹ್ಯಾರೀಸ್, ರಿಜ್ವಾನ್ ಆರ್ಷದ್ ಅಭಿನಂದನೆ ಸಲ್ಲಿಸಿದರು.