ವಿಶ್ವಕಪ್ ಕ್ರಿಕೆಟ್‌: ಇಂದು ಭಾರತ ಆಸ್ಟ್ರೇಲಿಯಾ ಫೈನಲ್ ಪಂದ್ಯ: ನರೇಂದ್ರ ಮೋದಿ ಸ್ಟೇಡಿಯಂ ಸುತ್ತ ಬಿಗಿ ಭದ್ರತೆ

ವಿಶ್ವಕಪ್ ಕ್ರಿಕೆಟ್‌: ಇಂದು ಭಾರತ ಆಸ್ಟ್ರೇಲಿಯಾ ಫೈನಲ್ ಪಂದ್ಯ: ನರೇಂದ್ರ ಮೋದಿ ಸ್ಟೇಡಿಯಂ ಸುತ್ತ ಬಿಗಿ ಭದ್ರತೆ 


ಅಹಮದಾಬಾದ್: ಕ್ರಿಕೆಟ್​ ವಿಶ್ವಕಪ್​​​​​​ ಕದನಕ್ಕೆ ಕೌಂಟ್​ಡೌನ್​​​ ಶುರುವಾಗಿದ್ದು, ಭಾರತ-ಆಸೀಸ್​ ಸಮರಕ್ಕೆ ಅಹ್ಮದಾಬಾದ್ ಸಜ್ಜಾಗಿದೆ. ಹೈವೋಲ್ಟೆಂಜ್​​ ಮ್ಯಾಚ್​ಗೆ ಇಡೀ ಜಗತ್ತು ಕಾದು ಕುಳಿತಿದೆ. 20 ವರ್ಷಗಳ ಬಳಿಕ ಭಾರತ-ಆಸೀಸ್​​​​ ಸೆಣೆಸಾಟ ನಡೆಯಲಿದೆ. 


ಮೂರನೇ ಬಾರಿ ವಿಶ್ವಕಪ್​ ಹಿಡಿಯಲು ಟೀಂ ಇಂಡಿಯಾ ಸಜ್ಜಾಗಿದ್ದು, 6ನೇ ಬಾರಿ ಚಾಂಪಿಯನ್​ ಆಗಲು ಆಸೀಸ್​ ರಣತಂತ್ರ ರೂಪಿಸಲಿದೆ. ಫೈನಲ್​​​​ ಕದನದಲ್ಲಿ ಸೆಂಚುರಿ ಭಾರಿಸೋದು ಯಾರು..? ವಿಕೆಟ್​ಗಳ ಬೇಟೆ ಆಡೋ ಯಶಸ್ವಿ ಬೌಲರ್​ ಯಾರಾಗ್ತಾರೆ..? ಈ ಬಾರಿ ವಿಶ್ವಕಪ್​​ನಲ್ಲಿ ಭಾರತ ಒಂದೂ ಮ್ಯಾಚ್​ ಸೋತಿಲ್ಲ. ಸತತ 11ನೇ ಗೆಲುವು ದಾಖಲಿಸ್ತಾರಾ ಬ್ಲೂ ಬಾಯ್ಸ್​..? ಕಾದುನೋಡಬೇಕಿದೆ.


ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಫೈನಲ್​​ ಪಂದ್ಯಕ್ಕೂ ಮುನ್ನ ಮನರಂಜನಾ ಕಾರ್ಯಕ್ರಮ ನಡೆಯಲಿದೆ. ವಿಶ್ವದ ನಂಬರ್​​​ ಒನ್​​​​​ ಸ್ಟೇಡಿಯಂನಲ್ಲಿ ಚಾಂಪಿಯನ್​​​ಗಳ ಕಾದಾಟ ನಡೆಯಲಿದೆ. ಮ್ಯಾಚ್​ಗೆ ಘಟಾನುಘಟಿ ಸೆಲಬ್ರೆಟಿಗಳು ಸಾಕ್ಷಿಯಾಗಲಿದ್ದಾರೆ. ಸೂಪರ್ ಸ್ಟಾರ್​​ಗಳಾದ ಅಮಿತಾಬ್ ಬಚ್ಚನ್, ರಜನಿಕಾಂತ್, ಕ್ರಿಕೆಟ್ ದಿಗ್ಗಜರಾದ ಕಪಿಲ್ ದೇವ್, ಸಚಿನ್, ಗಂಗೂಲಿ, ಧೋನಿ ಸಾಥ್​​ ನೀಡಲಿದ್ದಾರೆ. ನರೇಂದ್ರ ಮೋದಿ ಸ್ಟೇಡಿಯಂ ಸುತ್ತಮುತ್ತ ಭಾರೀ ಭದ್ರತೆ ಕೈಗೊಳ್ಳಲಾಗಿದೆ. ಗುಜರಾತ್​ ಸಿಎಂ ಭೂಪೇಂದ್ರ ಪಟೇಲ್ ಎಲ್ಲಾ ಸಿದ್ಧತೆ ವೀಕ್ಷಿಸಿದ್ದಾರೆ.


ಗೆದ್ದು ಬಾ ಭಾರತ ಎಂದು ಕೋಟಿ-ಕೋಟಿ ಜನರ ಪ್ರಾರ್ಥನೆ ಮಾಡುತ್ತಿದ್ದು, ಆಸ್ಟ್ರೇಲಿಯಾ ವಿರುದ್ಧ ಗೆಲ್ಲುವಂತೆ ವಿಶೇಷ ಪೂಜೆ-ಪುನಸ್ಕಾರ ಮಾಡಲಾಗುತ್ತಿದೆ. ಹೋಮ, ಹವನ, ಪೂಜೆ, ಪ್ರಾರ್ಥನೆ ಮಾಡಿ ಜನರು ಹಾರೈಸಿದ್ದಾರೆ. ಟೀಂ ಇಂಡಿಯಾ ಚಿಯರ್​​​​ ಮಾಡಲು ಖುದ್ದು ಪ್ರಧಾನಿ ಹಾಜರ್​​ ಆಗಲಿದ್ದಾರೆ. ಅಹಮದಾಬಾದ್​ ಸ್ಟೇಡಿಯಂಗೆ ಪ್ರಧಾನಿ ನರೇಂದ್ರ ಮೋದಿ ಬರ್ತಾ ಇದ್ದಾರೆ. ಮೋದಿಗೆ ಆಸ್ಟ್ರೇಲಿಯಾ ಉಪ ಪ್ರಧಾನಿ ರಿಚರ್ಡ್ ಮಾರ್ಲ್ಸ್ ಸಾಥ್ ನೀಡಲಿದ್ದು, ಅಹ್ಮದಾಬಾದ್​​ನ ಸ್ಟೇಡಿಯಂನಲ್ಲಿ ದಿಗ್ಗಜರ ಸಮಾಗಮ ನಡೆಯಲಿದೆ. ರಣರೋಚಕ ಕ್ಷಣಕ್ಕೆ 1.32 ಲಕ್ಷ ಪ್ರೇಕ್ಷಕರು ಸಾಕ್ಷಿಯಾಗಲಿದ್ದಾರೆ. ಇಂದಿನ ಪಂದ್ಯಕ್ಕೆ ಇಡೀ ವಿಶ್ವವೇ ಕಾದು ಕುಳಿತಿದೆ. ಫೈನಲ್​​ ವಾರ್​​​ ಮಧ್ಯಾಹ್ನ 2 ಗಂಟೆಗೆ ಶುರುವಾಗಲಿದೆ.



Previous Post Next Post