ಮುಂಬೈ: ಇಂದಿನಿಂದ ಎಸ್ಸೆಸ್ಸೆಫ್ ಗೋಲ್ಡನ್ ಫಿಫ್ಟಿ ಮಹಾಸಮ್ಮೇಳಕ್ಕೆ ಚಾಲನೆ

ಮುಂಬೈ: ಇಂದು ಎಸ್ಸೆಸ್ಸೆಫ್ ಗೋಲ್ಡನ್ ಫಿಫ್ಟಿ ಮಹಾಸಮ್ಮೇಳಕ್ಕೆ ಚಾಲನೆ
ಮುಂಬೈ: ಎಸ್ಸೆಸ್ಸೆಫ್ ಗೋಲ್ಡನ್ ಫಿಫ್ಟಿ ರಾಷ್ಟ್ರೀಯ ಮಹಾ ಸಮ್ಮೇಳನ ಇಂದು ಮುಂಬೈನ ಗೋವಂಡಿ ಡಿಯೋಮರ್ ಮೈದಾನದಲ್ಲಿ ಉದ್ಘಾಟನೆಗೊಳ್ಳಲಿದೆ. 

ಎಸ್ಸೆಸ್ಸೆಫ್ ರಾಷ್ಟ್ರೀಯ ಅಧ್ಯಕ್ಷ ಡಾ.ಫಾರೂಕ್ ನಯೀಮಿ ಅಧ್ಯಕ್ಷತೆ ವಹಿಸಲಿದ್ದು ಅರಬ್ ಲೀಗ್ ಅಂಬಾಸಿಡರ್ ಯೂಸುಫ್ ಮುಹಮ್ಮದ್ ಅಬ್ದುಲ್ಲಾ ಜಲೀಲ್ ಉದ್ಘಾಟಿಸಲಿದ್ದಾರೆ. ಕರ್ನಾಟಕ ವಿಧಾನಸಭಾ ಸ್ಪೀಕರ್‌ ಯೂಟಿ ಕಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. 

ಎರಡು ದಿನಗಳ ಕಾಲ ವಿವಿಧ ಸೆಮಿನಾರ್‌ಗಳು ನಡೆಯಲಿದ್ದು ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಮುಖರು ಭಾಗವಹಿಸಲಿದ್ದಾರೆ. 

ನವೆಂಬರ್ 26 ರವಿವಾರ ಸಂಜೆ ನಡೆಯಲಿರುವ ಸಮಾರೋಪ ಮಹಾ ಸಮ್ಮೇಳನವನ್ನು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ಉದ್ಘಾಟನೆ ಮಾಡಲಿದ್ದು ಸಯ್ಯಿದ್ ಆದಿಲ್ ಜಿಫ್ರೀ ಮದೀನಾ  ಮುನವ್ವರ, ಅಲ್ಲಾಮಾ ಶೈಖ್ ಯಹ್ಯಾ ರಾಡೋಸ್ ಅಮೆರಿಕಾ, ಸಯ್ಯಿದ್ ಅಫೀಫುದ್ದೀನ್ ಜೀಲಾನಿ ಬಗ್ದಾದ್, ಸಯ್ಯಿದ್ ಸ್ವಬಾಹುದ್ದೀನ್ ರಿಫಾಯೀ ಬಗ್ದಾದ್, ಅಲ್ಲಾಮಾ ಶೈಖ್ ಅಲಿಯ್ಯುಲ್ ಹಾಶಿಮೀ ದುಬೈ, ಸಯ್ಯಿದ್ ಮೆಹ್ದಿ ಮಿಯಾ ಸಾಹೇಬ್ ಅಜ್ಮೀರ್ ಷರೀಫ್, ಸಯ್ಯಿದ್ ಅಫ್ಝಲುದ್ದೀನ್ ಜುನೈದಿ ಗುಲ್ಬರ್ಗಾ, ವಿವಿಧ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಉಲಮಾ ನಾಯಕರು ಭಾಗವಹಿಸಲಿದ್ದಾರೆ.
Previous Post Next Post