ಎಸ್ಸೆಸ್ಸೆಫ್ ಗೋಲ್ಡನ್ ಫಿಫ್ಟಿ: ಇಂದು ರಾಷ್ಟ್ರೀಯ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ

ಎಸ್ಸೆಸ್ಸೆಫ್ ಗೋಲ್ಡನ್ ಫಿಫ್ಟಿ: ಇಂದು ರಾಷ್ಟ್ರೀಯ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ 
 ಅಫೀಫುದ್ದೀನ್ ಜೀಲಾನಿ ಬಾಗ್ದಾದ್ ಸಮಾರೋಪ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ

 ಮುಂಬೈ: ಕಳೆದ ಎರಡು ದಿನಗಳಿಂದ ಮುಂಬೈನ ಏಕತಾ ಉದ್ಯಾನದಲ್ಲಿ ನಡೆಯುತ್ತಿರುವ ಎಸ್ ಎಸ್ ಎಫ್ ಗೋಲ್ಡನ್ ಫಿಫ್ಟಿ ರಾಷ್ಟ್ರೀಯ ಸಮ್ಮೇಳನ ಇಂದು ಸಮಾರೋಪಗೊಳ್ಳಲಿದೆ.  ಮಧ್ಯಾಹ್ನ 3 ಗಂಟೆಗೆ ನಡೆಯುವ ಸಮಾರೋಪ ಸಮಾರಂಭವನ್ನು ಅಫೀಫುದ್ದೀನ್ ಜೀಲಾನಿ ಬಗ್ದಾದ್ ಉದ್ಘಾಟಿಸುವರು.  ಭಾರತದ ಗ್ರ್ಯಾಂಡ್ ಮುಫ್ತಿ ಶೇಖ್ ಅಬೂಬಕರ್ ಅಹ್ಮದ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಬದ್ರುಸ್ಸಾದಾತ್ ಸೈಯದ್ ಇಬ್ರಾಹೀಮುಲ್ ಖಲೀಲುಲ್ ಬುಖಾರಿ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ.

ಸಯ್ಯದ್ ಅಲಿ ಬಾಫಕಿ ತಙಳರ ಪ್ರಾರ್ಥನೆಯ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ದೊರೆಯಲಿದೆ.  ಸೈಯದ್ ಮುಯಿನ್ ಮಿಯಾ ಜಿಲಾನಿ, ಅಲ್ಲಾಮಾ ಹುಸೇನ್ ಶಾ ಜಿಲಾನಿ, ಮಹ್ ದೀ ಮಿಯಾ ಸಾಹಿಬ್, ಮನ್ನಾನ್ ಮಿಯಾ ಸಾಹಿಬ್, ಮುಫ್ತಿ ಬದ್ ರೇ ಆಲಂ, ಕುರ್ರತುಸ್ಸಾದಾತ್ ಸೈಯದ್ ಫಝಲ್ ಕೋಯಮ್ಮ ಅಲ್ ಬುಖಾರಿ, ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಸೈಯದ್ ಅಬ್ದುರ್ರಹ್ಮಾನ್ ಬಾಖವಿ ಅಲ್ ಅಹ್ಸನಿ, ಸೈಯದ್ ಮುಹಮ್ಮದ್  ಅಶ್ರಫ್ ಅಶ್ರಫಿ,  ಮುಫ್ತಿ ಮುಹಮ್ಮದ್, ಮುಫ್ತಿ ಯಹ್ಯಾ ರಝಾ, ಮುಫ್ತಿ ಮುಜ್ತಬ ಶರೀಫ್, ಡಾ.ಅಬ್ದುಲ್ ಹಕೀಂ ಅಝ್ಹರಿ, ಡಾ.ಮುಹಮ್ಮದ್ ಫಾರೂಕ್ ನಈಮಿ, ನೌಶಾದ್ ಆಲಂ ಮಿಸ್ಬಾಹಿ, ಅಬೂ ಸುಫಿಯಾನ್ ಇಬ್ರಾಹಿಂ ಮದನಿ, ಸಯೀದ್ ನೂರಿ ಸಾಹಿಬ್ ಸೇರಿದಂತೆ ಹಲವು ಉಲಮಾ ನಾಯಕರು ಉಪಸ್ಥಿತರಿರುವರು. 

ಸಮಾರೋಪ ಸಮ್ಮೇಳನದಲ್ಲಿ ಭಾರತದ ವಿವಿಧ ರಾಜ್ಯಗಳಿಂದ ಹತ್ತು ಲಕ್ಷ ಜನರು ಭಾಗವಹಿಸಲಿದ್ದಾರೆ.

ಏಕತಾ ಉದ್ಯಾನದಲ್ಲಿ ಎರಡು ದಿನಗಳಿಂದ ನಡೆಯುತ್ತಿರುವ ಏಳು ಸಾವಿರ ವಿದ್ಯಾರ್ಥಿ ಪ್ರತಿನಿಧಿಗಳು ಭಾಗವಹಿಸಿದ ಸಮಾವೇಶ ಇಂದು ಮಧ್ಯಾಹ್ನ 3 ಗಂಟೆಗೆ ಮುಕ್ತಾಯವಾಗಲಿದೆ. ಆಧ್ಯಾತ್ಮಿಕತೆ, ಕೌಶಲ್ಯ ಅಭಿವೃದ್ಧಿ, ವೃತ್ತಿಪರ ಕೋರ್ಸ್, ನೀತಿಶಾಸ್ತ್ರ, ಕೃಷಿ, ಆರ್ಥಿಕತೆ, ಸೌಹಾರ್ದತೆ, ರಾಜಕೀಯ, ಶಿಕ್ಷಣ, ಸಾಮಾಜಿಕ, ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಐವತ್ತಕ್ಕೂ ಹೆಚ್ಚು ವಿಭಿನ್ನ ವಿಷಯಗಳನ್ನು ಚರ್ಚಿಸಲಾಯಿತು.  ಸಮ್ಮೇಳನದ ಅಂಗವಾಗಿ ನಗರದಲ್ಲಿ ಅಧ್ಯಯನ ಮತ್ತು ವೃತ್ತಿ ಜೀವನದಲ್ಲಿ ಆಧುನಿಕ ಜಗತ್ತಿನ ಹೊಸ ಜ್ಞಾನವನ್ನು ನೀಡುವ ಎಜುಸೀನ್ ಎಕ್ಸ್‌ಪೋ ಮತ್ತು ಪುಸ್ತಕ ಮೇಳವನ್ನು ಆಯೋಜಿಸಲಾಗಿದೆ. 

ಎಸ್ಸೆಸ್ಸೆಫ್ ಗೋಲ್ಡನ್ ಫಿಫ್ಟಿ ನ್ಯಾಷನಲ್ ಕಾನ್ಫರೆನ್ಸನ್ನು ಅರಬ್ ಲೀಗ್ ರಾಯಭಾರಿ ಯೂಸುಫ್ ಮುಹಮ್ಮದ್ ಅಬ್ದುಲ್ಲಾ ಜಮೀಲ್ ಅವರು ಕಳೆದ ದಿನ ಉದ್ಘಾಟಿಸಿದರು.
Previous Post Next Post