ಪಂಚ ರಾಜ್ಯ ವಿಧಾನಸಭಾ ಚುನಾವಣೆ: ನಾಲ್ಕು ರಾಜ್ಯ ಗಳ ಮತ ಎಣಿಕೆಗೆ ಕ್ಷಣಗಣನೆ, ಮಿಜೋರಾಮ್ ಫಲಿತಾಂಶ ನಾಳೆ
ನವದೆಹಲಿ: ಲೋಕಸಭಾ ಚುನಾವಣೆಗೆ ಮುಂಚಿನ 'ಸೆಮಿಫೈನಲ್' ಎಂದೇ ಪರಿಗಣಿಸಲಾಗಿರುವ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಹಾಗೂ ಛತ್ತೀಸಗಢ ವಿಧಾನಸಭೆ ಚುನಾವಣೆಯ ಮತ ಎಣಿಕೆ ಭಾನುವಾರ ನಡೆಯಲಿದೆ.
ಈ ಫಲಿತಾಂಶವು ಬಿಜೆಪಿ ಹಾಗೂ ಅದರ ಪ್ರಮುಖ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಸಾಮರ್ಥ್ಯ ಹಾಗೂ ದೌರ್ಬಲ್ಯಗಳನ್ನೂ ಹೊರಹಾಕಲಿದೆ.
ನವೆಂಬರ್ 7ರಿಂದ 30ರ ಅವಧಿಯಲ್ಲಿ ಐದು ರಾಜ್ಯಗಳಿಗೆ ಚುನಾವಣೆ ನಡೆದಿತ್ತು. ಮಿಜೋರಾಂನಲ್ಲಿ ಮಾತ್ರ ಮತ ಎಣಿಕೆ ಸೋಮವಾರ ನಡೆಯಲಿದೆ. ಡಿ.3ರಂದು ನಿಗದಿಯಾಗಿರುವ ಮತ ಎಣಿಕೆಯನ್ನು ಬೇರೆ ದಿನಕ್ಕೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ಮಿಜೋರಾಂನ ಎನ್‌ಜಿಒ ಕೋ ಆರ್ಡಿನೇಷನ್ ಕಮಿಟಿ ರಾಜ್ಯದಾದ್ಯಂತ ಶುಕ್ರವಾರ ಪ್ರತಿಭಟನೆ ನಡೆಸಿತ್ತು. ಹೀಗಾಗಿ, ಸೋಮವಾರ ಮತ ಎಣಿಕೆ ನಡೆಸಲು ಆಯೋಗ ತೀರ್ಮಾನಿಸಿದೆ.