ಸಯ್ಯದ್ ಮುಹಮ್ಮದ್ ಮಿದ್ ಲಾಜ್ ಖಾದಿರಿಗೆ SSA ಖಾದರ್ ಹಾಜಿ ಮೆಮೋರಿಯಲ್‌ ಅವಾರ್ಡ್

ಸಯ್ಯದ್ ಮುಹಮ್ಮದ್ ಮಿದ್ ಲಾಜ್ ಖಾದಿರಿಗೆ SSA  ಖಾದರ್ ಹಾಜಿ ಮೆಮೋರಿಯಲ್‌ ಅವಾರ್ಡ್
ಬೆಂಗಳೂರು :‌ ಬೆಂಗಳೂರು ಮೂಲದ ಮರ್ಕಝ್ ಖೈಖಾ ಇನ್ಸ್ಟಿಟ್ಯೂಟ್ ಆಫ್ ಹೈಯರ್ ಇಸ್ಲಾಮಿಕ್ ಸ್ಟಡೀಸ್ (ಮರ್ಕಿನ್ಸ್) ವತಿಯಿಂದ ಕೊಡಲಾಗುವ ಮೊದಲ SSA  ಖಾದರ್ ಹಾಜಿ ಮೆಮೋರಿಯಲ್‌ ಅವಾರ್ಡ್ ಸಯ್ಯದ್ ಮುಹಮ್ಮದ್ ಮಿದ್ಲಾಜ್ ಖಾದಿರಿ ಅವರಿಗೆ ನೀಡಲಾಯಿತು. 

ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಅತ್ಯುತ್ತಮ ಕೊಡುಗೆ ನೀಡಿದ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಜಾಮಿಅಃ ಮರ್ಕಝುಸ್ಸಖಾಫತಿ ಸುನ್ನಿಯ್ಯದ ಕಾರ್ಯಕಾರಿ ಉಪಾಧ್ಯಕ್ಷರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಎಸ್.ಎಸ್. ಅಬ್ದುಲ್ ಖಾದರ್ ಹಾಜಿ, ಬೆಂಗಳೂರಿನ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ-ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಇತಿಹಾಸ ಸೃಷ್ಟಿಸಿದ ವ್ಯಕ್ತಿತ್ವ. ಉತ್ತರ ಕರ್ನಾಟಕ, ಆಂಧ್ರಪ್ರದೇಶ  ರಾಜ್ಯಗಳಲ್ಲಿ ಸಯ್ಯದ್ ಮಿದ್ಲಾಜ್ ಖಾದಿರಿ ಅವರ ಕಾರ್ಯ ಚಟುವಟಿಕೆಗಳಿಗೆ ಈ ಪ್ರಶಸ್ತಿ ಸಂದಿದೆ. ಸಂಸ್ಥೆಯ ವಾರ್ಷಿಕ ಕಲಾ ಕಾರ್ಯಕ್ರಮ ಆರ್ಟೋರಿಕ್ಸ್-24 ರಲ್ಲಿ ಕರ್ನಾಟಕ ಸ್ಪೀಕರ್ ಯು.ಟಿ.ಖಾದರ್, ಸಯ್ಯದ್ ಮಿದ್ಲಾಜ್ ಖಾದಿರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಮರ್ಕಿನ್ಸ್ ಪ್ರಾಂಶುಪಾಲರಾದ ಜಾಫರ್ ಅಹ್ಮದ್ ನೂರಾನಿ, ಉಪ ಪ್ರಾಂಶುಪಾಲರಾದ ಹಬೀಬುಲ್ಲಾ ನೂರಾನಿ, ಅಧ್ಯಕ್ಷ ಅಬ್ದುರಝೀಕ್, ಜನಾಬ್ ಸುಹೇಲ್ ಸೇಠ್, ಜನಾಬ್ ಮಸೂದ್ ಕರೀಂ ಸೇರಿದ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾಸರಗೋಡು ಜಿಲ್ಲೆಯವರಾದ  ಸಯ್ಯದ್ ಮಿದ್ಲಾಜ್ ಖಾದಿರಿ ಅವರು ಪ್ರಸ್ತುತ ಸಂಸ್ಥೆಯ ಹಳೆಯ  ವಿದ್ಯಾರ್ಥಿ ಸಂಘಟನೆಯಾದ  ಕ್ವೆಸ್ಟ್ ಫೌಂಡೇಶನ್ ನ ಡೈರೆಕ್ಟರ್ ಜನರಲ್‌ ಆಗಿದ್ದಾರೆ.
Previous Post Next Post