SSF KMJ IHSAAN ಚಿತ್ರದುರ್ಗ ವತಿಯಿಂದ ಜಶ್ನೇ ಈದ್ ಮೀಲಾದುನ್ನಬೀ ಕಾನ್ಫರೆನ್ಸ್ ನಡೆಸಲಾಯಿತು
ಚಿತ್ರದುರ್ಗ: (ಸೆ.14) SSF KMJ IHSAAN ಚಿತ್ರದುರ್ಗ ವತಿಯಿಂದ ಚಿತ್ರದುರ್ಗದ ಹೊರಪೇಟೆ ಇಮಾಮ್ ಮಹಮ್ಮದ್ ರಜಾ ಸರ್ಕಲ್ ನಲ್ಲಿ ಜಶ್ನೇ ಈದ್ ಮೀಲಾದುನ್ನಬೀ ಕಾನ್ಫರೆನ್ಸ್ ನಡೆಸಲಾಯಿತು. ಮೌಲಿದ್ ಬುರ್ದಾ ಸಲಾಂ ಬೈತ್ ಆಲಾಪನೆ ನಡೆಸಲಾಯಿತು. ಮುಖ್ಯ ಭಾಷಣಗಾರರಾಗಿ ಆಗಮಿಸಿದ ಉಮರುಲ್ ಫಾರೂಖ್ ಮಿಸ್ಬಾಹಿ ಅಲ್ ಅಝ್ಹರಿ 'ಹುಬ್ಬುರ್ರಸೂಲ್' ಎಂಬ ವಿಷಯದಲ್ಲಿ ತರಗತಿ ಮಂಡಿಸಿದರು.
Hara Gumbaz
_Meelad Campaign-2024_
SSF CHITRADURGA & Darul Ihsaan Madrasa Chitradurga
`Rabeeul Avval- 01 to 30`
▪️Marhaba Yaa Rabee'a
▪️Meelad Juloos
▪️Har Ghar Moulid (150🏡)
▪️Prabhatha Moulid
▪️Beedi Bhashan
▪️Meelad Mehfil @Villages
▪️Meelad Conference
▪️Meelad Kids' Fest
▪️Sweet Distribution
▪️Al Vida Yaa Rabee'a
`SSF ಚಿತ್ರದುರ್ಗ ಜಿಲ್ಲಾ ಸಮಿತಿ ಪ್ರತಿ ವರ್ಷ ನೀಡುವ 'ಖಿದ್ಮಾ ಅವಾರ್ಡ್' ಈ ಬಾರಿ ವಲಿಯುಲ್ಲಾ ಹಝ್ರತ್ ಗೆ ನೀಡಲಾಯಿತು`
ಚಿತ್ರದುರ್ಗ (ಸೆ.13): SSF ಚಿತ್ರದುರ್ಗ ಜಿಲ್ಲಾ ಸಮಿತಿ ಪ್ರತಿ ವರ್ಷ ನೀಡುತ್ತಿರುವ 'ಖಿದ್ಮಾ ಅವಾರ್ಡ್' ಈ ಬಾರಿ ವಲಿಯುಲ್ಲಾ ಹಝ್ರತ್ (ಸಾನಿ ಪೇಶ್ ಇಮಾಂ ಸುಲ್ತಾನಿಯ ಜಾಮಿಯಾ ಮಸೀದಿ ಚಿತ್ರದುರ್ಗ) ಗೆ ನೀಡಲಾಗಿದೆ. ಅವರು ಕಳೆದ ಮುವ್ವತ್ತು ವರ್ಷಗಳಿಂದ ಚಿತ್ರದುರ್ಗದ ಸುಲ್ತಾನಿಯ ಜಾಮಿಯಾ ಮಸೀದಿಯಲ್ಲಿ ದೀನಿ ಖಿದ್ಮತ್ ಮಾಡುತ್ತಿದ್ದಾರೆ.
ಈ ಮೊದಲು ಚಿತ್ರದುರ್ಗದ ಆಝಂ ಮುಸೀದಿಯಲ್ಲಿ 40 ವರ್ಷಗಳ ಕಾಲ ಸಾನಿ ಇಮಾಂ ಮತ್ತು ಮುಅಝ್ಝಿನ್ ಆಗಿ ಸೇವೆ ಸಲ್ಲಿಸಿದ್ದ ಅಬ್ದುಲ್ಲಾ ಹಝ್ರತ್ (ಮರ್ಹೂಂ) ಅವರಿಗೆ ನೀಡಲಾಗಿತ್ತು. ನಂತರದ ವರ್ಷ ಪ್ಯಾರೆಜನ್ ಸಾಹೆಬ್ ಅವರಿಗೆ ನೀಡಲಾಗಿದೆ. ಅವರು ಚಿತ್ರದುರ್ಗ ನಗರ ಮತ್ತು ಹಳ್ಳಿಗಳಲ್ಲಿ ಕಳೆದು 25 ವರ್ಷಗಳಿಂದ ಜನಾಝ ಗುಸ್ಲ್ ಮಾಡಿಸುತ್ತಿದ್ದಾರೆ. ಮೂರನೇಯ ಅವಾರ್ಡ್ ಗೌಸೇ ಆಝಂ ಮಸೀದಿಯಲ್ಲಿ ದೀರ್ಘಕಾಲದಿಂದ ಮುಅಝ್ಝಿನ್ ಆಗಿ ಸೇವೆ ಸಲ್ಲಿಸುತ್ತಿರುವ ಇಬ್ರಾಹಿಂ ಹಝ್ರತ್ ಗೆ ನೀಡಲಾಗಿದೆ. ಈ ಬಾರಿಯ ಅವಾರ್ಡ್ SSF ಜಶ್ನೇ ಈದ್ ಮೀಲಾದುನ್ನಬೀ ಕಾನ್ಫರೆನ್ಸ್ ನಲ್ಲಿ ವಲಿಯುಲ್ಲಾ ಹಝ್ರತ್ ಗೆ ನೀಡಲಾಯಿತು. ಅವರು ಕಳೆದ ಮುವ್ವತ್ತು ವರ್ಷಗಳಿಂದ ಚಿತ್ರದುರ್ಗದ ಸುಲ್ತಾನಿಯ ಜಾಮಿಯಾ ಮಸೀದಿಯಲ್ಲಿ ದೀನಿ ಖಿದ್ಮತ್ ಮಾಡುತ್ತಿದ್ದಾರೆ.
ದೀನಿ ಖಿದ್ಮತ್ ಮಾಡುತ್ತಿರುವವರನ್ನು ಗುರುತಿಸಿ SSF ಚಿತ್ರದುರ್ಗ ಜಿಲ್ಲಾ ಸಮಿತಿ ಪ್ರತಿವರ್ಷವು ಖಿದ್ಮಾ ಅವಾರ್ಡ್ ನೀಡಿ ಬರುತ್ತಿದೆ.